
2009ರಲ್ಲಿ ಐಪಿಎಲ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದು, ಆ ಸಂದರ್ಭದಲ್ಲಿನ ಪ್ರಮುಖ ಘಟನೆಯೊಂದನ್ನು ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅವರ ತಂದೆ ಅರವಿಂದ್ ಪೂಜಾರ ಸ್ಮರಿಸಿಕೊಂಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ಚೇತೇಶ್ವರ್ ಪೂಜಾರ, ಶಾರುಖ್ ಖಾನ್ ಸಹ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದು, ಆಟದ ವೇಳೆ ಅವರು ಗಾಯಗೊಂಡಿದ್ದರು.
ಆಗ ಚೇತೇಶ್ವರ್ ಪೂಜಾರ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದ ಶಾರುಖ್ ಖಾನ್, ಚೇತೇಶ್ವರ್ ಪೂಜಾರ ಅವರಿಗೆ ಇಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ನೀಡಿದ್ದೇವೆ. ನೀವು ಬಯಸಿದರೆ ಕುಟುಂಬ ವೈದ್ಯರ ಜೊತೆ ಎಲ್ಲ ಸದಸ್ಯರು ದಕ್ಷಿಣ ಆಫ್ರಿಕಾಕ್ಕೆ ಬರಲು ವ್ಯವಸ್ಥೆ ಮಾಡುತ್ತೇನೆ ಎಂದಿದ್ದರಂತೆ.