1998 ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ಕುಚ್ ಕುಚ್ ಹೋತಾ ಹೈ ಬಾಲಿವುಡ್‌ನ ಅತ್ಯಂತ ರೋಮ್ಯಾಂಟಿಕ್ ಚಿತ್ರ ಎಂದ್ರೆ ತಪ್ಪಿಲ್ಲ. ಶಾರುಖ್ ಖಾನ್, ಕಾಜೋಲ್ ಮತ್ತು ರಾಣಿ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಈ ಚಲನಚಿತ್ರವು ತಲೆಮಾರುಗಳಿಂದ ಪ್ರೀತಿ ಮತ್ತು ಸ್ನೇಹವನ್ನು ಬಹಳ ಅರ್ಥಗರ್ಭಿತವಾಗಿಸಿದೆ. ಈಗಲೂ ಕೂಡ ಈ ಚಿತ್ರಕ್ಕೆ ಅನೇಕ ಅಭಿಮಾನಿಗಳಿದ್ದಾರೆ.
ಈ ಸಿನಿಮಾದಲ್ಲಿ ನಟಿ ರಾಣಿ ಮುಖರ್ಜಿ ರಾಕ್ ಮಾಡಿದ ಶಾರ್ಟ್-ಫಿಟ್ಡ್ ಡ್ರೆಸ್‌ಗಳು ಅಥವಾ ಶಾರುಖ್ ಖಾನ್ ಅವರ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು, ಕಾಜೋಲ್ ಅವರು ಧರಿಸಿದ್ದ ಹೆಡ್‌ಬ್ಯಾಂಡ್ ಲುಕ್‌ನಂತಹ ಕೆಲವು ಐಕಾನಿಕ್ ಫ್ಯಾಶನ್ ಮರೆಯುವಂತೆಯೇ ಇಲ್ಲ. ಅಂದಹಾಗೆ, ‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಕಾಜೋಲ್ ಅವರು ಧರಿಸಿದ್ದ ಐಕಾನಿಕ್ ಹೆಡ್‌ಬ್ಯಾಂಡ್, ಕೂದಲಿಗೆ ಫಿಕ್ಸ್ ಆಗಿತ್ತು ಎಂಬುದು ನಿಮಗೆ ತಿಳಿದಿದೆಯೇ..?
ಹೌದು, ನಟ ರಣವೀರ್ ಸಿಂಗ್ ನಡೆಸಿಕೊಡುವ ರಿಯಾಲಿಟಿ ಶೋವೊಂದರಲ್ಲಿ ಸ್ವತಃ ಈ ಚಿತ್ರದ ನಿರ್ದೇಶಕ ಕರಣ್ ಜೋಹರ್ ಅವರೇ ಬಿಗ್ ರಿವೀಲ್ ಮಾಡಿದ್ದಾರೆ. ಸಂಚಿಕೆಯನ್ನು ಮೊದಲೇ ಚಿತ್ರೀಕರಿಸಲಾಗಿದ್ದು, ಕರಣ್ ಜೋಹರ್ ಮತ್ತು ಕಾಜೋಲ್ ಅವರನ್ನೊಳಗೊಂಡ ಶೋ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಸಂಚಿಕೆಯಲ್ಲಿ, ಈ ಚಲನಚಿತ್ರದ ಬಗ್ಗೆ ಹೆಚ್ಚು ತಿಳಿದಿಲ್ಲದ ಹಲವಾರು ಸಂಗತಿಗಳನ್ನು ಅನಾವರಣಗೊಳಿಸಲಾಗುತ್ತದೆ.
ಇನ್ನೂ ಸಂಚಿಕೆ ಪ್ರಸಾರವಾಗದಿದ್ದರೂ ಅದರ ಪ್ರೋಮೋ ಔಟ್ ಆಗಿದೆ. ಅದರಲ್ಲಿ ಕಾಜೋಲ್ ಅವರಿಗೆ ಹೆಡ್‌ಬ್ಯಾಂಡ್ ಇರಲಿಲ್ಲ. ನಟಿಯ ವಿಗ್‌ನಲ್ಲಿ ಕೆಲವು ಸಮಸ್ಯೆಗಳಿದ್ದ ಕಾರಣ ಹೆಡ್‌ಬ್ಯಾಂಡ್ ಅನ್ನು ಅಳವಡಿಸಲಾಯಿತು ಎಂದು ಕರಣ್ ಜೋಹಾರ್ ಬಹಿರಂಗಪಡಿಸಿದ್ದಾರೆ. ಈ ಹೆಡ್‌ಬ್ಯಾಂಡ್ ನಂತರ ಫ್ಯಾಷನ್ ಆಗಿಬಿಟ್ಟಿತು..!