ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, ಬಿಳಿ ಬಣ್ಣದ ಅಕ್ಕಿಗಿಂತ ಹತ್ತು ಪಟ್ಟು ಹೆಚ್ಚು ಫೈಬರ್ ಹೊಂದಿದೆ.
ಕಂದು ಬಣ್ಣದ ಅಕ್ಕಿ ಅಥವಾ ಕುಚ್ಚಲಕ್ಕಿ ಬಳಸಿ ನಿಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬಹುದು.
ಕಂದು ಬಣ್ಣದ ಅಕ್ಕಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಬ್ರೌನ್ ರೈಸ್ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿದ್ರಾಹೀನತೆಯನ್ನು ತಡೆಗಟ್ಟುತ್ತದೆ. ದೇಹದಲ್ಲಿ ನೀರನ್ನು ಉಳಿಸುತ್ತದೆ ಮತ್ತು ಹೆಚ್ಚುವರಿ ದ್ರವವನ್ನು ಹೊರಹಾಕುತ್ತದೆ.
ಮೆದುಳಿನ ನರ ಕೋಶಗಳನ್ನು ಉತ್ತೇಜಿಸುತ್ತದೆ. ಹೃದಯವನ್ನು ರಕ್ಷಿಸುತ್ತದೆ. ಥೈರಾಯ್ಡ್ ಗ್ರಂಥಿಯನ್ನ ಸುಧಾರಿಸುತ್ತದೆ. ಕರುಳಿನ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಕೇಂದ್ರ ನರಮಂಡಲವನ್ನು ಬಲಪಡಿಸುತ್ತದೆ.