ಹಿಂದೂ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವವಿದೆ. ಅದರಲ್ಲೂ ಮುತ್ತೈದೆ ಮಹಿಳೆಯರಿಗೆ ಕುಂಕುಮ ಅನ್ನೋದು ಒಂದು ಪವಿತ್ರವಾದ ಅಲಂಕಾರಿಕ ವಸ್ತುವಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ತಮ್ಮ ಸುಮಂಗಲಿತನದ ಸಂಕೇತವಾಗಿ ಕುಂಕುಮವನ್ನ ಹಣೆಗೆ ಹಚ್ಚಿಕೊಳ್ತಾರೆ. ಇದನ್ನ ಹೊರತುಪಡಿಸಿ ವಾಸ್ತು ಶಾಸ್ತ್ರದಲ್ಲಿ ಕುಂಕುಮಕ್ಕೆ ಏನೇನು ಪ್ರಾಮುಖ್ಯತೆ ಇದೆ ಅನ್ನೋದನ್ನ ನೋಡೋಣ ಬನ್ನಿ.
ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ ನೀವು ಕುಂಕುಮವನ್ನ ಮಲ್ಲಿಗೆ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದನ್ನ ಆಂಜನೇಯನಿಗೆ 5 ಮಂಗಳವಾರ ಹಾಗೂ ಶನಿವಾರ ಅರ್ಪಿಸಿ. ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ಕುಂಕುಮಕ್ಕೆ ಮುಖ್ಯ ಸ್ಥಾನವಿದೆ. ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನ ದೂರ ಮಾಡಬೇಕು ಅಂದರೆ ಮನೆಯ ಮುಂದಿನ ಗೇಟಿನಲ್ಲಿ 40 ದಿನಗಳ ಕಾಲ ಕುಂಕುಮವನ್ನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಇಡಿ. ಇದರಿಂದ ವಾಸ್ತು ದೋಷ ಪರಿಹಾರವಾಗಲಿದೆ.
ಮನೆಯಲ್ಲಿ ಲಕ್ಷ್ಮೀ ಹಾಗೂ ದುರ್ಗಾ ಮಾತೆಯನ್ನ ಪೂಜೆ ಮಾಡಿದ ಬಳಿಕ ಸ್ವಲ್ಪ ಕುಂಕುಮವನ್ನ ಮನೆಯ ಗೇಟಿಗೆ ಹಚ್ಚಿ. ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ಉಂಟಾಗೋದಿಲ್ಲ.
ನಿಮಗೆ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಗೌರವ ಸರಿಯಾಗಿ ಸಿಗುತ್ತಿಲ್ಲ ಅಂದರೆ ನೀವು ಈ ಮಾರ್ಗವನ್ನ ಅನುಸರಿಸಬಹುದು. ಇದಕ್ಕಾಗಿ ನೀವು ವೀಳ್ಯದೆಲೆಯಲ್ಲಿ ಪಟಿಕ ಹಾಗೂ ಕುಂಕುಮವನ್ನ ಹಾಕಿ ಅಶ್ವತ್ಥ ಮರದ ಅಡಿಯಲ್ಲಿ ಇಡಿ. ಇದನ್ನ ಮೂರು ಬುಧವಾರಗಳ ಮಾಡೋದ್ರಿಂದ ನಿಮಗೆ ಗೌರವ ತಾನಾಗೇ ಸಿಗಲಿದೆ.