ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ನೀವು ನೋವುಣ್ಣಬೇಕಾಗುತ್ತದೆ. ನೋವು ತಡೆಯಲಾರದೆ ಅನೇಕರು ನೋವಿನ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ಮನೆ ಔಷಧಿ ಮಾಡ್ತಾರೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಕೀಲು ನೋವಿಗೆ ಕೆಲ ಆಹಾರ ಒಳ್ಳೆಯ ಮದ್ದು ಎಂದಿದೆ. ಕೊಬ್ಬಿನಾಂಶವಿರುವ ಮೀನು, ಬೀಜಗಳು ಹಾಗೂ ಆಲಿವ್ ಆಯಿಲ್ ಸೇವನೆ ಮಾಡುವುದರಿಂದ ನೋವು ನಿವಾರಣೆಯಾಗಿ ಆರಾಮ ಸಿಗುತ್ತದೆ.
ಹಾಗೆ ಕೀಲು ನೋವು ಇರುವವರು ಕೆಲವೊಂದು ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಅವುಗಳ ಸೇವನೆಯಿಂದ ನೋವು ಜಾಸ್ತಿಯಾಗಿ ಹಿಂಸೆ ಅನುಭವಿಸಬೇಕಾಗುತ್ತದೆ.
ಬಿಸಿ ಬಿಸಿ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ
ಟೊಮೋಟೋ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಕೀಲು ನೋವಿನಿಂದ ಬಳಲುತ್ತಿರುವವರು ಟೋಮೋಟೋ ಸೇವನೆ ಮಾಡದಿರುವುದು ಒಳಿತು. ಟೋಮೋಟೋ ಸೇವನೆ ಮಾಡುವುದರಿಂದ ಯೂರಿಕ್ ಆಮ್ಲದ ಪ್ರಮಾಣ ಜಾಸ್ತಿಯಾಗುತ್ತದೆ. ಇದರಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಕೀಲು ನೋವು ಕಾಣಿಸಿಕೊಳ್ಳುತ್ತದೆ.
ಹೃದಯ ಖಾಯಿಲೆಯುಳ್ಳವರು ಹಾಗೂ ಡಯಾಬಿಟಿಸ್ ರೋಗಿಗಳಿಗೆ ಮಾತ್ರವಲ್ಲ ಕೀಲು ನೋವಿರುವವರಿಗೂ ಸೋಡಾ ಸೇವನೆ ಒಳ್ಳೆಯದಲ್ಲ. ಸೋಡಾದಲ್ಲಿ ಸಕ್ಕರೆಯ ಪ್ರಮಾಣ ಜಾಸ್ತಿ ಇರುತ್ತದೆ. ಸಕ್ಕರೆ ಪ್ರಮಾಣವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಸೈಟೋಕಿನ್ ಬಿಡುಗಡೆಯಾಗುತ್ತದೆ. ಇದರಿಂದ ನೋವು ಜಾಸ್ತಿಯಾಗುತ್ತದೆ.
ಒಮೆಗಾ -6 ಕೊಬ್ಬಿನ ಆಮ್ಲ ಸೇವನೆ ಮಾಡುವುದರಿಂದಲೂ ಕೀಲು ನೋವು ಜಾಸ್ತಿಯಾಗುತ್ತದೆ.