ಯೋಗ ಆರೋಗ್ಯಕ್ಕೆ ತುಂಬಾ ಉತ್ತಮ. ಯೋಗದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಈ ಯೋಗಾಭ್ಯಾಸ ಮಾಡಿ.
ಕೀಮೋಥೆರಪಿ ಚಿಕಿತ್ಸೆಯಿಂದಾಗುವ ವಾಕರಿಕೆ ಮತ್ತು ವಾಂತಿಯನ್ನು ನಿವಾರಿಸಲು ಪವನಮುಕ್ತಾಸನ ಮತ್ತು ಉತ್ತಾನ ಪಾದಾಸನವನ್ನು ಅಭ್ಯಾಸ ಮಾಡಿ.
ಕ್ಯಾನ್ಸರ್ ಚಿಕಿತ್ಸೆಯಿಂದ ಉಂಟಾಗುವ ನೋವನ್ನು ನಿವಾರಿಸಲು ಸಡಿಲವಾದ ವ್ಯಾಯಾಮಗಳು, ಸ್ಟ್ರೆಚಸ್, ಸುದರ್ಶನ ಕ್ರಿಯೆ ಮತ್ತು ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ.
ಧ್ಯಾನ ಮತ್ತು ಚಲನೆಯ ಧ್ಯಾನವನ್ನು ಅಭ್ಯಾಸ ಮಾಡಿ. ಇದು ನಿದ್ರೆಯ ಚಕ್ರವನ್ನು ಸ್ಥಿರವಾಗಿಸಲು ಸಹಾಯ ಮಾಡುತ್ತದೆ.
ಮೈಂಡ್ ಸೌಂಡ್ ರೆಸೋನೆನ್ಸ್ ತಂತ್ರ ಇದು ಚಿಕಿತ್ಸೆಗೆ ಸಂಬಂಧಿಸಿದ ನೋವಿನೊಂದಿಗೆ ಬರುವ ಭಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.