\ಸಾಮಾನ್ಯವಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ, ಟೂರಿಸ್ಟ್ ಪ್ಲೇಸ್ ಗಳಲ್ಲಿ, ಬಸ್, ಟ್ರೈನ್ ಗಳಲ್ಲಿ ಕಿಸೆಗಳ್ಳರು ಇದ್ದೇ ಇರುತ್ತಾರೆ. ಎಷ್ಟೇ ಎಚ್ಚರವಾಗಿದ್ದರೂ ಗೊತ್ತಿಲ್ಲದಂತೆ ನಮ್ಮ ಕಿಸೆಗಳಿಗೆ ಕತ್ತರಿ ಹಾಕುತ್ತಾರೆ. ಆದ್ರೆ ನಮ್ಮ ಹಣ, ವಸ್ತುಗಳನ್ನು ಕಿಸೆಗಳ್ಳರಿಂದ ಜೋಪಾನ ಮಾಡೋಕೆ ಇಲ್ಲಿದೆ ದಾರಿ.
ಕಿಸೆಗಳ್ಳರಿಗೆ ಗೊತ್ತಾಗದಂತೆ ವಸ್ತುಗಳನ್ನು ಪ್ಯಾಕ್ ಮಾಡೋದು. ಉದಾಹರಣೆಗೆ ಲ್ಯಾಪ್ ಟಾಪ್ ಅನ್ನು ಕೊರಿಯನ್ ಕವರ್ ನಲ್ಲಿ ಸುತ್ತಿ ಪ್ಯಾಕ್ ಮಾಡಿದಲ್ಲಿ ಕಿಸೆಗಳ್ಳರು ಬೇಸ್ತು ಬೀಳೋದ್ರಲ್ಲಿ ಡೌಟಿಲ್ಲ.
ನಿಮ್ಮಲ್ಲಿರುವ ಹಣವನ್ನೆಲ್ಲ ಒಂದೇ ಜಾಗದಲ್ಲಿ ಇಡಬೇಡಿ. ಬೇರೆ ಬೇರೆ ಕಡೆಗಳಲ್ಲಿ ಹಣವನ್ನಿಡಿ.
ಒಮ್ಮೆಲೇ ನೋಡಿದರೆ ಗೊತ್ತಾಗದಂತೆ ಇರುವ ಪುಟ್ಟ ಪುಟ್ಟ ಪಾಕೆಟ್ ಗಳಿರುವ ಬ್ಯಾಗ್ ಕೊಂಡುಕೊಳ್ಳಿ.
ಹ್ಯಾಂಡ್ ಬ್ಯಾಗ್, ಪರ್ಸ್ ಗಳನ್ನು ಕೊಂಡೊಯ್ಯುವುದನ್ನು ಅವಾಯ್ಡ್ ಮಾಡಿ. ಹಣ, ಚಿನ್ನಾಭರಣ, ಕಾರ್ಡ್ ಗಳನ್ನು ನೀವು ಅದರಲ್ಲೇ ಇಟ್ಟುಕೊಂಡಿರುತ್ತೀರೆಂದು ಇದರಿಂದ ಸುಲಭವಾಗಿ ಊಹಿಸಬಹುದು.
ಟೂರಿಸ್ಟ್ ಪ್ಲೇಸ್ ಗಳಿಗೆ ಹೋಗುವಾಗ ಪಿಕ್ ಪಾಕೆಟರ್ಸ್ ಊಹಿಸಲು ಸಾಧ್ಯವಾಗದಂತಹ ಡ್ರೆಸ್ ಮಾಡಿಕೊಳ್ಳಿ.
ರಹಸ್ಯ ಪಾಕೆಟ್ ಗಳಿರುವ ಡ್ರೆಸ್ ಗಳನ್ನು ಕೊಂಡುಕೊಳ್ಳಿ. ಅದರಲ್ಲಿ ನೀವು ಹಣ, ಕಾರ್ಡ್ ಮುಂತಾದವುಗಳನ್ನು ಹಾಕಿಕೊಳ್ಳಬಹುದು.
ಮನಿ ಬೆಲ್ಟ್ ನಲ್ಲಿ ದುಡ್ಡಿರಿಸಿ. ಇದರಿಂದ ಹಣವನ್ನು ಕಿಸೆಗಳ್ಳರಿಂದ ಕಾಪಾಡಿಕೊಳ್ಳಬಹುದು.
ಬ್ಯಾಗ್ ಗಳನ್ನು ಯಾವಾಗಲೂ ಲಾಕ್ ಮಾಡಿ.
ಬ್ಯಾಗ್ ಗಳನ್ನು ಯಾವಾಗಲೂ ಜೊತೆಯಲ್ಲಿಯೇ ಇರಿಸಿಕೊಂಡಿರಿ. ಒಂದು ಕ್ಷಣಕ್ಕೂ ಅದನ್ನು ಬಿಟ್ಟು ಹೋಗಬೇಡಿ.
ಬ್ಯಾಗ್ ಗಳನ್ನು ಬೆನ್ನಿಗೆ ಹಾಕಿಕೊಳ್ಳುವ ಬದಲು ಅದನ್ನು ಮುಂದೆ ಹಾಕಿಕೊಳ್ಳಿ.
ಟ್ರಾವೆಲ್ ಇನ್ಶುರೆನ್ಸ್ ಮಾಡಿಸುವುದು ಬೆಸ್ಟ್.