ದೇಶದ ರೈತರ ಆರ್ಥಿಕ ಕಲ್ಯಾಣ ಮತ್ತು ಬೆಂಬಲಕ್ಕಾಗಿ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳ ನೇರ ಲಾಭ ಅನ್ನದಾತರಿಗೇ ಸಿಗಬೇಕು ಅನ್ನೋದು ಉದ್ದೇಶ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಸಬ್ಸಿಡಿ ಡೀಸೆಲ್ ಯೋಜನೆಗಳು ಕೂಡ ಇವುಗಳಲ್ಲೊಂದು. ಇದರ ಜೊತೆಗೆ ರೈತರಿಗೆ ಸಾಲ ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನು ಸಹ ಸರ್ಕಾರ ಜಾರಿ ಮಾಡಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ರೈತರು ಬ್ಯಾಂಕ್‌ಗೆ ಅಲೆಯುವ ಅವಶ್ಯಕತೆಯೇ ಇಲ್ಲ ಆದರೆ ಈ ಸೌಲಭ್ಯ ಎಲ್ಲಾ ರೈತರಿಗೆ ದೊರೆಯುತ್ತಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿತ್ತು. ಈ ಸೌಲಭ್ಯದ ಲಾಭ ಯಾರಿಗೆ ಸಿಗಲಿದೆ, ಇದರ ಅನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ.
KCCಯ ಪ್ರಯೋಜನಗಳ ಬಗ್ಗೆ ಬಹುತೇಕ ಎಲ್ಲಾ ರೈತರಿಗೂ ತಿಳಿದಿದೆ. ದೇಶದ ರೈತರು ಈ ಕಾರ್ಡ್ ಸಹಾಯದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಬಹುದು. ಇದಲ್ಲದೆ ಇನ್ನೂ ಅನೇಕ ಅನುಕೂಲತೆಗಳಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಫೆಡರಲ್ ಬ್ಯಾಂಕ್ ಈ ಪೈಲಟ್ ಯೋಜನೆಯನ್ನು ಪ್ರಾರಂಭಿಸಿದವು. ಈ ಯೋಜನೆಯಡಿ ಡಿಜಿಟಲ್ ರೀತಿಯಲ್ಲಿ ರೈತರಿಗೆ ಕೆಸಿಸಿ ನೀಡಲು ಆರಂಭಿಸಿದ್ದಾರೆ.
ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗಾಗಿ ಬ್ಯಾಂಕ್ ಶಾಖೆಗೆ ರೈತರು ಬರಬೇಕಾಗಿಲ್ಲ ಎಂದು ಈ ಬ್ಯಾಂಕ್‌ಗಳು ಘೋಷಿಸಿವೆ. ಪ್ರಾಯೋಗಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್‌ಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಈ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆರಂಭಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮಧ್ಯಪ್ರದೇಶದ ಹಾರ್ದಾ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ನೀಡಿದೆ.
ಫೆಡರಲ್ ಬ್ಯಾಂಕ್ ಚೆನ್ನೈನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಶೀಘ್ರವೇ ದೇಶಾದ್ಯಂತ ಕೆಸಿಸಿ ಜಾರಿಯಾಗಲಿದೆ ಎನ್ನುತ್ತಾರೆ ಯೂನಿಯನ್ ಬ್ಯಾಂಕ್ ಅಧಿಕಾರಿಗಳು. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ರೈತರು ಸಹ ಮುನ್ನಡೆಯಬೇಕು ಎಂಬುದು ಇದರ ಮೂಲ ಉದ್ದೇಶ. ರೈತರು ಈಗ ಜಮೀನು ದಾಖಲೆಗಳ ಪರಿಶೀಲನೆಗಾಗಿ ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ಬ್ಯಾಂಕ್ ಸ್ವತಃ ಆನ್‌ಲೈನ್‌ನಲ್ಲಿ ಕೃಷಿ ಭೂಮಿ ಕಾಗದ ಪತ್ರವನ್ನು ಪರಿಶೀಲಿಸುತ್ತದೆ.