ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ ಒಂದಷ್ಟು ಮನೆಮದ್ದು ಇಲ್ಲಿದೆ ನೋಡಿ.
ಬೆಳ್ಳುಳ್ಳಿ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ಹತ್ತಿಯಲ್ಲಿ ಅದ್ದಿ, ಆ ಹತ್ತಿಯಲ್ಲಿರುವ ಮಿಶ್ರಣವನ್ನು ಕಿರು ನಾಲಿಗೆಗೆ ಹಚ್ಚಿ. ಇದರಿಂದ ಕೆರೆತದ ಸಮಸ್ಯೆ ಕಡಿಮೆಯಾಗುತ್ತದೆ.
ಕಾಳು ಮೆಣಸಿಗೆ ಉಪ್ಪನ್ನು ಸೇರಿಸಿ ಈ ಎರಡನ್ನೂ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಮಿಶ್ರಣದಲ್ಲಿ ಹತ್ತಿಯನ್ನು ಅದ್ದಿ ಅದನ್ನು ಕಿರು ನಾಲಿಗೆಗೆ ತಾಗಿಸಿದರೆ ಕೂಡ ಸಮಸ್ಯೆ ಪರಿಹಾರವಾಗುತ್ತದೆ.
ಇನ್ನು ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿಕೊಂಡು ಆಗಾಗ ಬಾಯಿ ಮುಕ್ಕಳಿಸುತ್ತಾ ಇರಿ. ಇದರಿಂದ ಕೂಡ ನೋವು ಶಮನವಾಗುತ್ತದೆ.