ಸಂಶೋಧನೆಯೊಂದರ ಪ್ರಕಾರ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರಂತೆ. ದಣಿದು ಬಂದು ಗೊರಕೆ ಹೊಡೆಯುತ್ತಿದ್ದಾರೆ ಎಂದು ನೀವದನ್ನು ನಿರ್ಲಕ್ಷಿಸದಿರಿ. ಇದನ್ನು ನಿಲ್ಲಿಸುವ ಕ್ರಮಗಳ ಬಗ್ಗೆಯೂ ಅಲೋಚಿಸಿ.
ಸಂಶೋಧನೆಯೊಂದರ ಪ್ರಕಾರ ಕಾಲಿನಡಿ ದ್ರವಾಂಶ ಶೇಖರಣೆ ಆಗುವುದೇ ಗೊರಕೆಗೆ ಕಾರಣವಂತೆ. ದಿನವಿಡೀ ಕುಳಿತು ಕೆಲಸ ಮಾಡುವುದರಿಂದ ಇದು ಶೇಖರಣೆಗೊಂಡು ಶ್ವಾಸನಾಳದ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ರಾತ್ರಿ ಮಲಗಿದ ವೇಳೆ ಉಸಿರಾಟ ಪ್ರಕ್ರಿಯೆಯಲ್ಲಿ ಗಾಳಿಯನ್ನು ಹೊರಹಾಕುವಾಗ ಅದು ಗೊರಕೆಯಂಥ ಸದ್ದನ್ನು ಹುಟ್ಟಿಸುತ್ತದೆ.
ನಿಮ್ಮ ಮನೆಯವರೊಂದಿಗೆ ನೀವು ಮಲಗಿ ಉತ್ತಮ ನಿದ್ದೆ ಪಡೆಯಬೇಕಿದ್ದರೆ ಶುಂಠಿ ಹಾಗೂ ಜೇನುತುಪ್ಪದ ಚಹಾವನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲನ್ನು ಶುದ್ಧೀಕರಿಸುತ್ತದೆ ಎನ್ನಲಾಗಿದೆ.
ಹಾಗೇ ಅನಾನಸು, ಬಾಳೆಹಣ್ಣು ಮತ್ತು ಕಿತ್ತಳೆಯನ್ನು ಸೇವಿಸುವುದರಿಂದಲೂ ಉತ್ತಮ ನಿದ್ದೆ ಪಡೆಯಬಹುದು. ಅಲಿವ್ ಆಯಿಲ್ ಅನ್ನು ಮೂಗಿನ ಮೂಲಕ ದೀರ್ಘವಾಗಿ ಎಳೆದುಕೊಂಡರೂ ಗೊರಕೆ ಕಿರಿಕಿರಿ ದೂರವಾಗುತ್ತದೆ.
ಗೊರಕೆಯಿಂದ ರಾತ್ರಿ ನಿದ್ದೆ ಇಲ್ಲದಂತಾಗಿ, ಬೆಳಗಿನ ಜಾವ ವಿಪರೀತ ಸುಸ್ತು ಇದ್ದರೆ ಮಾತ್ರ ವೈದ್ಯರನ್ನು ಸಂಪರ್ಕಿಸಿ.