ಮೊಬೈಲ್ ಬಳಕೆದಾರರಿಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುವುದು ಪ್ರಮೋಷನ್ ಕಾಲ್ ಗಳು. ಸಮಯ ಸಂದರ್ಭ ಇಲ್ಲದೆ ಯಾವಾಗ ಬೇಕಾದರೂ ಇವರುಗಳು ಕಾಲ್ ಮಾಡಿ ಲೋನ್ ಬೇಕಾ, ರೆಸಾರ್ಟ್ ಸೇವೆ ಬೇಕಾ ಎಂದು ಕರೆ ಮಾಡುತ್ತಿರುತ್ತಾರೆ.
ಇವರ ಜೊತೆಗೆ ವಂಚಕರೂ ಸಹ ಕ್ರೆಡಿಟ್ ಡೆಬಿಟ್ ಕಾರ್ಡ್ ಗಳ ಮಾಹಿತಿ ಪಡೆಯಲು ಬ್ಯಾಂಕ್ ಸಿಬ್ಬಂದಿಯಂತೆ ಕರೆ ಮಾಡುತ್ತಿರುತ್ತಾರೆ. ಇಂತಹ ಕರೆಗಳಿಂದ ಪಾರಾಗಲು ಮೊಬೈಲ್ ಬಳಕೆದಾರರು ಈವರೆಗೆ ‘ಟ್ರೂ ಕಾಲರ್’ ಸೇರಿದಂತೆ ಹಲವು ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರು. ಇಂತಹ ಕಾಲ್ ಗಳ ಕುರಿತು ಹೆಚ್ಚಿನ ಮಾಹಿತಿ ಬೇಕೆಂದರೆ ಅದಕ್ಕೆ ಹಣವನ್ನು ಪಾವತಿಸಬೇಕಿತ್ತು.
ಇದೀಗ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಟೆಲಿಕಾಂ ಸಚಿವಾಲಯದಿಂದಲೇ ಟ್ರೂ ಕಾಲರ್ ಮಾದರಿಯಲ್ಲಿ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದ್ದು, ಮೊಬೈಲ್ ಬಳಕೆದಾರರಿಗೆ ಅನಗತ್ಯ ಕರೆದಾರರ ನಿಖರ ಮಾಹಿತಿ ತಿಳಿಯಲಿದೆ. ಹೊಸದಾಗಿ ಮಾರುಕಟ್ಟೆ ಬರುವ ಮೊಬೈಲ್ ಗಳಲ್ಲಿ ಈ ಸೌಲಭ್ಯ ಇನ್ ಬಿಲ್ಟ್ ಆಗಿರಲಿದ್ದು, ಹಾಲಿ ಬಳಕೆದಾರರು ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತ ಅಪ್ಲಿಕೇಶನ್ ಸದ್ಯದಲ್ಲೇ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿದೆ.