ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು.
ನೈಸರ್ಗಿಕವಾಗಿ ದೊರೆಯುವ ವಸ್ತುಗಳಾದ ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸಿ ಹಲ್ಲಿಯನ್ನು ಓಡಿಸಬಹುದು. ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಆಗದು. ಇವುಗಳ ರಸವನ್ನು ಸ್ಪ್ರೇ ಮಾಡುವುದರಿಂದ ಹಲ್ಲಿ ಸುಳಿಯುವುದಿಲ್ಲ. ಕಾಫೀ ಬೀಜ, ತಂಬಾಕು ಹುಡಿ ಮಾಡಿ ಕಿಟಕಿ ಬಾಗಿಲು ಸಂಧಿಯಲ್ಲಿ ಇಡುವುದರಿಂದಲೂ ಹಲ್ಲಿಯನ್ನು ಓಡಿಸಬಹುದು.
ಮೊಟ್ಟೆ ಕವಚ ಅಲ್ಲಲ್ಲಿ ಇಡುವುದರಿಂದ ಹಲ್ಲಿ ಹತ್ತಿರಕ್ಕೆ ಸುಳಿಯುವುದಿಲ್ಲ, ಕಪಾಟಿನಲ್ಲಿ, ಸಿಂಕ್ ನಲ್ಲಿ, ಮೇಲಿನ ಕಿಟಕಿಗಳಲ್ಲಿ ನುಸಿ ಗುಳಿಗೆ ಇಡುವುದರಿಂದ ಹಲ್ಲಿಯಿಂದ ಮುಕ್ತಿ ಪಡೆಯಬಹುದಾಗಿದೆ. ಆದರೆ ಈ ನುಸಿ ಗುಳಿಗೆಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳುವುದು ಅಗತ್ಯ.