ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ನಲ್ಲಿ ಆಡಳಿತಾಧಿಕಾರಿ ಹುದ್ದೆಗಾಗಿ ಅಧಿಕಾರಿಗಳಿಬ್ಬರ ನಡುವೆ ಕಿತ್ತಾಟ ನಡೆದಿದೆ ಎಂಬ ಮಾತು ಕೇಳಿಬಂದಿದೆ.
ರಾಜಶ್ರೀ ಜೈನಾಪುರ ಎನ್ನುವವರು 2019ರಿಂದ ಕಿಮ್ಸ್ ಆಡಳಿತಾಧಿಕಾರಿಯಾಗಿದ್ದು ಇತ್ತೀಚೆಗಷ್ಟೇ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಜೈನಾಪುರ ಅವರಿಂದ ತೆರವಾದ ಸ್ಥಾನಕ್ಕೆ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ವರ್ಗಾವಣೆಯಾದರೂ ಕೂಡ ಅಧಿಕಾರ ಹಸ್ತಾಂತರ ಮಾಡದೇ ರಾಜಶ್ರೀ ಜೈನಾಪುರ ರಜೆ ಮೇಲೆ ತೆರಳಿರುವುದು ಅಧಿಕಾರ ಕಿತ್ತಾಟ ಆರೋಪಕ್ಕೆ ಪುಷ್ಠಿ ನೀಡುವಂತಿದೆ.
BIG BREAKING: ಹಿಜಾಬ್ ಹಾಗೂ ಕೇಸರಿ ಸಂಘರ್ಷದ ನಡುವೆ ಮತ್ತೊಂದು ಕಿಡಿ; ಆಜಾನ್ ಮಾದರಿಯಲ್ಲಿ ರಾಮಜಪಕ್ಕೆ ಮುಂದಾದ ಋಷಿಕೇಶ ಸ್ವಾಮೀಜಿ
ಪ್ರಭಾವಿ ರಾಜಕಾರಣಿಯೊಬ್ಬರು ಅಧಿಕಾರ ಹಸ್ತಾಂತರ ಮಾಡದಂತೆ ಒತ್ತಡ ಹೇರುತ್ತಿರುವುದಾಗಿಯೂ ಆರೋಪ ಕೇಳಿಬಂದಿದೆ. ಆಡಳಿತಮಂಡಳಿ ನಾಮಫಲಕದಲ್ಲಿಯೂ ಜೈನಾಪುರ ಹೆಸರೇ ಇನ್ನೂ ಇದೆ. ಮತ್ತೊಂದೆಡೆ ವರ್ಗಾವಣೆಗೊಂಡಿರುವ ನೂತನ ಅಧಿಕಾರಿ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಕಳೆದ ಮೂರು ದಿನಗಳಿಂದ ಕಾರ್ಯಾರಂಭ ಮಾಡಿದ್ದಾರೆ.