ಇದು ಕಿತ್ತಳೆ ಹಣ್ಣಿನ ಸೀಸನ್. ಕಿತ್ತಳೆ ಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಬಗೆ ಬಗೆಯ ತಿಂಡಿ ಮಾಡಿ ಸವಿದರೆ ಅದರ ಗಮ್ಮತ್ತೆ ಬೇರೆ. ಕಿತ್ತಳೆ ಹಣ್ಣಿನ ಕೇಸರಿಭಾತ್ ಎಂದಾದರು ಸವಿದಿದ್ದೀರಾ. ಇಲ್ಲಿದೆ ನೋಡಿ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
ಮೃದುವಾದ ಅನ್ನ – 1 ಕಪ್
ಕಿತ್ತಳೆ ರಸ – 1 ಕಪ್
ಬೆಲ್ಲ/ಸಕ್ಕರೆ – ರುಚಿಗೆ ತಕ್ಕಷ್ಟು
ತುಪ್ಪ – ಅರ್ಧ ಕಪ್
ಕರಿದ ದ್ರಾಕ್ಷಿ ಗೋಡಂಬಿ – 1/2 ಕಪ್
ಏಲಕ್ಕಿ ಪುಡಿ – 1/4 ಚಮಚ
ಕೇಸರಿಯುಕ್ತ ಬಾದಾಮಿ ಪುಡಿ – 1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಕಿತ್ತಳೆ ರಸಕ್ಕೆ ಬೆಲ್ಲ ಅಥವಾ ಸಕ್ಕರೆ ಮತ್ತು ತುಪ್ಪ ಹಾಕಿ ಕರಗಿಸಿ. ನಂತರ ಅದಕ್ಕೆ ಅನ್ನ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಬಾದಾಮಿ ಪುಡಿ ಸೇರಿಸಿ ಮೇಲಿನಿಂದ ಒಂದು ಸ್ಪೂನ್ ತುಪ್ಪ ಹಾಕಿ ಕಲಸಿದರೆ ಕಿತ್ತಳೆ ಹಣ್ಣಿನ ಕೇಸರಿಭಾತ್ ರೆಡಿ ಟು ಈಟ್.