ಕಪ್ಪು ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ, ಬೇಯಿಸಿದ ಕಡಲೆಯಾಗಿರಲಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಆರೋಗ್ಯಕ್ಕೆ ಒಳ್ಳೆಯದು.
ರಾತ್ರಿ ಕಡಲೆಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಜೇನು ತುಪ್ಪದೊಂದಿಗೆ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದಿಲ್ಲ. ಕಲ್ಲು ಬೆಳೆದಿದ್ದರೆ ತಕ್ಷಣ ಹೊರಕ್ಕೆ ಬರುತ್ತದೆ.
ವಿಟಮಿನ್ ಎ, ಬಿ, ಸಿ, ಡಿ ಮತ್ತು ರಂಜಕ, ಪೊಟ್ಯಾಷಿಯಂ, ಮೆಗ್ನೀಸಿಯಮ್ ಮತ್ತು ಖನಿಜಗಳ ಮೂಲವಾಗಿರುವುದರಿಂದ ರಾತ್ರಿ ನೆನೆಸಿಟ್ಟ ಕಡಲೆಯನ್ನು ಬೆಳಿಗ್ಗೆ ಒಂದು ಮುಷ್ಠಿ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತ ಬನ್ನಿ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಹುರಿದ ಕಡಲೆಯ ಸೇವನೆ ಮಾಡುವುದರಿಂದ ಪದೇ ಪದೇ ಮೂತ್ರ ಬರುವುದು ಕಡಿಮೆಯಾಗುತ್ತದೆ. ಕಡಲೆ ಜೊತೆ ಬೆಲ್ಲ ಬೆರೆಸಿ ಸೇವನೆ ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಕಡಿಮೆಯಾಗುತ್ತವೆ.
ಕಡಲೆ ಹಿಟ್ಟಿನ ಪುಡಿಯನ್ನು ಅರಿಶಿನದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಹೊಳಪು ಪಡೆಯುತ್ತದೆ.
ರಾತ್ರಿ ನೆನೆಸಿಟ್ಟ ಕಡಲೆಗೆ ಉಪ್ಪು, ಶುಂಠಿ, ಜೀರಿಗೆ ಬೆರೆಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಕಡಲೆ ಸಿಪ್ಪೆ ತೆಗೆಯದೆ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಮಧುಮೇಹ ರೋಗಿಗಳಿಗೂ ಇದು ಪರಿಣಾಮಕಾರಿ. ಬೆಳ್ಳಂಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಬೇಕು.
ಹಸಿ ಕಡಲೆಕಾಳು ಸೇವಿಸುವುದರಿಂದಲು ಪ್ರೋಟಿನ್ ಹೆಚ್ಚಿಸಿಕೊಳ್ಳಬಹುದು.