alex Certify ಕಿಡ್ನಿ ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು ಪ್ರೇರೇಪಿಸುವುದು ಹೀಗೆ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ.

ಆದರೆ ಇತ್ತೀಚಿಗೆ ಅನೇಕ ಕಾರಣಗಳಿಂದ ಬಹಳಷ್ಟು ಜನರ ಮೂತ್ರಕೋಶಗಳು ವ್ಯಾಧಿಗೊಳಪಡುತ್ತಿವೆ. ಕಿಡ್ನಿ, ರೋಗಪೀಡಿತವಾಗದಂತೆ ಮಾಡಬೇಕೆಂದರೆ ಕ್ರಮಬದ್ಧವಾದ ಆಹಾರ ಸೇವನೆ ಅತ್ಯಗತ್ಯ. ಜೊತೆಗೆ ಕೆಲವೊಂದು ಪದಾರ್ಥಗಳನ್ನು ಊಟದ ಭಾಗವನ್ನಾಗಿ ಮಾಡಿಕೊಂಡರೆ ಮೂತ್ರಪಿಂಡಗಳು ಆರೋಗ್ಯವಾಗಿರುತ್ತವೆ.

* ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಿತಿ ಮೀರಬಾರದು. 10-12 ಗ್ಲಾಸ್ ಗಳಷ್ಟು ನೀರು ಸೇವಿಸಿದರೆ ಸಾಕು. ಆದರೆ ಯಾವುದೇ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು ಎಂಬುದು ಆತನ ದೇಹದ ತತ್ವ ದಿನಚರಿಯನ್ನು ಅವಲಂಬಿಸಿರುತ್ತದೆ.

* ಈರುಳ್ಳಿ, ಕೆಂಪು ಕ್ಯಾಪ್ಸಿಕಮ್ ನಲ್ಲಿ ಪೊಟ್ಯಾಶಿಯಂ ಕಡಿಮೆ ಪ್ರಮಾಣದಲ್ಲಿರುವುದರಿಂದ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡುತ್ತದೆ. ಅದೇ ರೀತಿ ಈರುಳ್ಳಿಯಲ್ಲಿರುವ ಕ್ರೋಮಿಯಂ ಜೈವಿಕ ಕ್ರಿಯೆಗೆ ಒಳಿತನ್ನುಂಟು ಮಾಡುತ್ತದೆ.

* ಮೂತ್ರಪಿಂಡಗಳ ಆರೋಗ್ಯವನ್ನು ಹೂ ಕೋಸು ಸಹ ಕಾಪಾಡುತ್ತದೆ. ಇದನ್ನು ಬೇಯಿಸಿ ಆಗಲಿ ಅಥವಾ ಬಿಸಿನೀರಿನಲ್ಲಿ ಒಂದು ಬಾರಿ ಅದ್ದಿ ತೆಗೆದ ನಂತರ ಉಪಯೋಗಿಸಬೇಕು.

* ದಿನಕ್ಕೊಂದು ಆಪಲ್ ಸೇವಿಸುವುದರಿಂದ ಕಿಡ್ನಿ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.

* ಒಮೆಗಾ ಫ್ಯಾಟಿ ಆಮ್ಲಗಳು ಹೇರಳವಾಗಿರುವ ಮೀನನ್ನು ಸೇವಿಸಿದರೆ ಕಿಡ್ನಿಗಳ ಕಾರ್ಯತತ್ಪರತೆ ಉತ್ತಮವಾಗಿರುತ್ತದೆ.

* ಕುಂಬಳ ಬೀಜಗಳು ಸಹ ಮೂತ್ರಪಿಂಡಗಳಲ್ಲಿ ಕಲ್ಲು ಉತ್ಪತ್ತಿಯಾಗದಂತೆ ತಡೆಯುತ್ತದೆ.

* ಬೂದುಬಣ್ಣದ ಗೆಣಸು, ದ್ರಾಕ್ಷಿ, ಕಲ್ಲಂಗಡಿ, ಸ್ಟ್ರಾಬೆರಿ ಹಣ್ಣುಗಳು ಸಹ ಮೂತ್ರಪಿಂಡಕ್ಕೆ ರೋಗ ತಗುಲದಂತೆ ಕಾಪಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...