ಬೇಸಿಗೆ ಕಾಲ ಬಂತು ಅಂದರೆ ಸಾಕು ಕಬ್ಬಿನ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತೆ. ನಿಮ್ಮ ಬಾಯಾರಿಕೆಯನ್ನ ತಣಿಸೋಕೆ ಈ ರುಚಿಕರ ಪಾನೀಯ ಸಹಾಯ ಮಾಡೋದ್ರ ಜೊತೆ ಜೊತೆಗೆ ದೇಹದ ಆರೋಗ್ಯಕ್ಕೆ ಅಗಾಧ ಪ್ರಮಾಣದಲ್ಲಿ ಪೋಷಕಾಂಶಗಳನ್ನ ನೀಡುತ್ತೆ.
ಕಬ್ಬಿನ ಹಾಲನ್ನ ವಾರದಲ್ಲಿ ಕನಿಷ್ಟ ಮೂರು ದಿನವಾದರೂ ಸೇವನೆ ಮಾಡಬೇಕು, ಕಬ್ಬಿನ ಹಾಲು ಸೇವನೆಯಿಂದ ನಿತ್ರಾಣ ಸಮಸ್ಯೆ ದೂರವಾಗಲಿದೆ. ಅಲ್ಲದೇ ಕಿಡ್ನಿಯ ಆರೋಗ್ಯವನ್ನ ಕಾಪಾಡೋಕೆ ಕಬ್ಬಿನ ಹಾಲಿಗಿಂತ ಒಳ್ಳೆಯ ಪಾನೀಯ ಮತ್ತೊಂದಿಲ್ಲ. ಲಿವರ್ನ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಜಾಂಡೀಸ್ ವಿರುದ್ಧವೂ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.
ಚರ್ಮದಲ್ಲಿನ ಅದರಲ್ಲೂ ವಿಶೇಷವಾಗಿ ಮುಖದ ಮೇಲಿನ ಕಲೆಗಳನ್ನ ನಿವಾರಿಸಿ ಆರೋಗ್ಯಯುತ ಚರ್ಮವನ್ನ ನೀಡುತ್ತದೆ. ಅಲ್ಲದೇ ತಲೆಗೂದಲಿನಲ್ಲಿರುವ ಹೊಟ್ಟಿನ ಸಮಸ್ಯೆಗೂ ಮುಕ್ತಿ ಸಿಗಲಿದೆ. ಶಕ್ತಿ ಹೀನತೆ ಹಾಗೂ ಮಲಬದ್ಧತೆ ಸಮಸ್ಯೆಗೂ ರಾಮಬಾಣ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನ ಹೆಚ್ಚಿಸುವಲ್ಲಿ ಕಬ್ಬಿನ ಹಾಲು ಮಹತ್ವದ ಪಾತ್ರ ವಹಿಸುತ್ತೆ.