ಸಾಮಾಜಿಕ ಜಾಲತಾಣಗಳು ವಿಲಕ್ಷಣ ಮತ್ತು ಮನಸ್ಸಿಗೆ ಮುದ ನೀಡುವ ವಿಷಯಗಳಿಗೆ ಹಾಟ್‌ಸ್ಪಾಟ್ ಆಗಿದೆ ಅಂದ್ರೆ ತಪ್ಪಿಲ್ಲ. ಇಲ್ಲಿ ಆಗಾಗ್ಗೆ ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ ನೀವು ಅಚ್ಚರಿ ಪಡ್ತೀರಾ..!
ಒಂದು ವೇಳೆ ನಿಮಗೆ ಟೊಮೆಟೊವನ್ನೋ ಅಥವಾ ಇತರೆ ತರಕಾರಿಗಳನ್ನು ಕತ್ತರಿಸಬೇಕು ಅನ್ಕೊಂಡಾಗ ಚಾಕು ಇಲ್ಲದಿದ್ರೆ ಏನ್ಮಾಡ್ತೀರಾ..? ಇಲ್ಲೊಬ್ಬ ಹೀಗೂ ನೀವು ಟೊಮೆಟೊವನ್ನು ಕಟ್ ಮಾಡಬಹುದು ಅಂತಾ ವಿಡಿಯೋ ಸಹಿತ ತೋರಿಸಿಕೊಟ್ಟಿದ್ದಾನೆ. ಹೌದು, ವ್ಯಕ್ತಿಯೊಬ್ಬ ಕಿಟ್‌ಕ್ಯಾಟ್ ಬಾರ್ ಚಾಕೋಲೇಟ್ ಅನ್ನು ಚಾಕುವಿನಂತೆ ಉಪಯೋಗಿಸಿರುವ ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವಿಡಿಯೋ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವ್ಯಕ್ತಿಯು ಮೊದಲಿಗೆ ಚಾಕನ್ನು ಉಜ್ಜುವ ಅಥವಾ ತೀಕ್ಷ್ಣಗೊಳಿಸುವ ಕಲ್ಲಿನ ಮೇಲೆ ಕಿಟ್‌ಕ್ಯಾಟ್ ಬಾರ್ ಅನ್ನು ಹರಿತಗೊಳಿಸಿದ್ದಾನೆ. ನಂತರ ಚಾಕುವಿನಂತೆ ಕಿಟ್‌ಕ್ಯಾಟ್ ಬಾರ್ ಅನ್ನು ಉಪಯೋಗಿಸಿ ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿದ್ದಾನೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋವನ್ನು 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಭಾರಿ ವೈರಲ್ ಆಗಿದೆ. ಕೆಲವರು ವಿಡಿಯೋವನ್ನು ಇಷ್ಟಪಟ್ರೆ, ಇನ್ನೂ ಕೆಲವರು ಗೊಂದಲಕ್ಕೊಳಗಾಗಿದ್ದಾರೆ.
https://www.youtube.com/watch?v=L-U3vAsPO9E