
ಸಾಕಷ್ಟು ಏಳು – ಬೀಳುಗಳನ್ನು ಕಂಡು ಕಿಚ್ಚ ಸುದೀಪ್ ಉತ್ತುಂಗಕ್ಕೆ ಬೆಳೆದು ನಿಂತಿದ್ದಾರೆ. ನಟನೆಯೊಂದಿಗೆ ನಿರ್ಮಾಪಕ, ನಿರ್ದೇಶನಕ್ಕೂ ಕಿಚ್ಚ ಸೈ ಎನಿಸಿಕೊಂಡಿದ್ದಾರೆ. ಅವರ ಏರಿಳಿತಕ್ಕೆ ಸದ್ಯ 26 ವರ್ಷ. ಅವರು ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟು 26 ವಸಂತಗಳು ಕಳೆದಿವೆ. 26 ವರ್ಷಗಳನ್ನು ಪೂರೈಸಿರುವ ಕಿಚ್ಚ, ಅಭಿಮಾನಿಗಳೊಂದಿಗೆ ತಮ್ಮ ಪತ್ನಿಗೂ ಧನ್ಯವಾದ ಅರ್ಪಿಸಿದ್ದಾರೆ.
ಸದ್ಯ ಈ ಸಂಭ್ರಮವನ್ನು ಅಭಿಮಾನಿಗಳು ಕೂಡ ಖುಷಿಯಿಂದಲೇ ಆಚರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ #26YearsOfSudeepism ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಸುದೀಪ್ ತಾಯವ್ವ ಚಿತ್ರದ ಮೂಲಕ 1997ರಿಂದಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹುಚ್ಚ ಚಿತ್ರ ಅವರಿಗೆ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಆ ನಂತರ ಸಾಲು ಸಾಲು ಚಿತ್ರಗಳು ಸುದೀಪ್ ಅವರ ನಟನೆಯಲ್ಲಿ ಮೂಡಿ ಬಂದಿವೆ.
26 ವರ್ಷ ನಟನೆಯಲ್ಲಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್, ಸದ್ಯ ತಮ್ಮ ಪತ್ನಿ ಪ್ರಿಯಾ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.