alex Certify ಕಿಚನ್‌ ʼಟವಲ್‌ʼ ಕ್ಲೀನಿಂಗ್ ಹೇಗಿರಬೇಕು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಚನ್‌ ʼಟವಲ್‌ʼ ಕ್ಲೀನಿಂಗ್ ಹೇಗಿರಬೇಕು…..?

ಅಡುಗೆ ಮಾಡಲು ಸಾಮಾನುಗಳು ಎಷ್ಟು ಮುಖ್ಯವೋ ಪಾತ್ರೆ ಹಿಡಿಯುವ, ಅಡುಗೆ ಮನೆ ಒರೆಸುವ ಕಿಚನ್‌ ಟವಲ್‌ಗಳು ಅಷ್ಟೇ ಮುಖ್ಯ. ಈ ಬಟ್ಟೆಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ಬಹಳ ಬೇಗ ಕೊಳೆಯಾಗುತ್ತದೆ ಮತ್ತು ಬೇಗ ಒದ್ದೆಯಾಗುವುದರಿಂದ ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳದು ವಾಸನೆಯಿಂದ ಕೂಡಿರುತ್ತವೆ. ಇದನ್ನು ಸ್ವಚ್ಛಗೊಳಿಸಲು ಕೆಲ ಕ್ರಮಗಳನ್ನು ಅನುರಿಸಬೇಕು.

* ಒಂದು ಟಬ್‌ನಲ್ಲಿ ನೀರು ಹಾಕಿ ಅದಕ್ಕೆ ಬೇಕಿಂಗ್‌ ಸೋಡಾ ಅಥವಾ ವಿನೆಗರ್‌ ಹಾಕಿ ಜೊತೆಗೆ ಬಟ್ಟೆ ತೊಳೆಯುವ ಡಿಟೆರ್ಜೆಂಟ್‌ ಹಾಕಿ ಮಿಕ್ಸ್‌ ಮಾಡಿ ಬಟ್ಟೆಗಳನ್ನು ಹಾಕಿ ರಾತ್ರಿ ಪೂರ ನೆನೆಸಿಡಿ. ಬೆಳಗ್ಗೆ ಅದನ್ನು ವಾಷಿಂಗ್‌ ಮಿಷನ್‌ ಅಥವಾ ಕೈಯಿಂದ ಸ್ವಚ್ಛಗೊಳಿಸಿ.

* ಬಟ್ಟೆಗಳು ತುಂಬಾ ಜಿಡ್ಡು ಮತ್ತು ಕೊಳೆಯಿದ್ದು, ವಾಸನೆಯಿಂದ ಕೂಡಿದ್ದರೆ ಡಿಟೆರ್ಜೆಂಟ್‌ ಬದಲಿಗೆ ಸಮಪ್ರಮಾಣದ ಬೊರಕ್ಸ್‌ ಪೌಡರ್‌ ಮತ್ತು ಬೇಕಿಂಗ್‌ ಸೋಡಾ ಬಳಸಿ ಬಟ್ಟೆಗಳನ್ನು ಸ್ವಚ್ಚಗೊಳಿಸಿ.

* ಕಿಚನ್‌ ಟವಲ್‌ಗಳನ್ನು ತಿಂಗಳಿಗೊಮ್ಮೆ ಬದಲಿಸಿ. ಹಳೆಯದನ್ನು ಬಿಸಾಕಿ. ಹೊಸ ಟವಲ್‌ಗಳನ್ನು ಇಡಿ.

* ಕಿಚನ್‌ ಟವಲ್‌ ವಾಸನೆಯನ್ನು ತಪ್ಪಿಸಲು ಅಡುಗೆ ಮನೆ ಕೆಲಸ ಆದ ನಂತರ ಅದನ್ನು ತೊಳೆದು ಗಾಳಿಯಾಡುವ ಜಾಗದಲ್ಲಿ ಒಣಗಿಸಿ. ಪ್ರತಿ ನಿತ್ಯ ಒಣಗಿದ ಶುಭ್ರವಾದ ಬೇರೆ ಬೇರೆ ಕಿಚನ್‌ ಟವಲ್‌ಗಳನ್ನು ಉಪಯೋಗಿಸಿ.

* ಪಾತ್ರೆಗಳನ್ನು ಹಿಡಿಯಲು, ಕೈಗಳನ್ನು ಒರೆಸಿಕೊಳ್ಳಲು, ಅಡುಗೆ ಮನೆ ಒರೆಸಲು, ತೊಳೆದ ಪಾತ್ರೆಗಳನ್ನು ಒರೆಸಲು ಪ್ರತ್ಯೇಕ ಬಟ್ಟೆಗಳನ್ನು ಇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...