
ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಹಾವುಗಳಿಗೆ ಹೆದರುತ್ತಾರೆ. ಆದರೆ ಕೆಲವರು ಹಾವನ್ನು ಕೈಯಲ್ಲಿ ಹಿಡಿಯುವುದು, ಕುತ್ತಿಗೆಗೆ ಸುತ್ತಿಕೊಳ್ಳುವುದು ಹೀಗೆ ಹಲವು ರೀತಿಯ ದುಸ್ಸಾಹಸಗಳಿಗೆ ಕೈಹಾಕ್ತಾರೆ.
ವಿಷಕಾರಿಯಲ್ಲದ ಹಾವುಗಳ ಜೊತೆಗೆ ಇಂತಹ ಸರಸ ಮಾಡಬಹುದು. ಆದ್ರೆ ಅತ್ಯಂತ ಅಪಾಯಕಾರಿ ಎನಿಸಿಕೊಂಡಿರೋ ಕಿಂಗ್ ಕೋಬ್ರಾ ಜೊತೆಗೆ ಇಂತಹ ಹುಡುಗಾಟವಾಡಲು ಹೋದ್ರೆ ಜೀವಕ್ಕೇ ಕುತ್ತು ಬರಬಹುದು. ಈ ಹಾವು ಕಡಿದ್ರೆ ಕೆಲವೇ ನಿಮಿಷಗಳಲ್ಲಿ ಸಾವು ಗ್ಯಾರಂಟಿ.
ಆದರೂ ಹುಡುಗಿಯೊಬ್ಬಳು ಕಿಂಗ್ ಕೋಬ್ರಾ ಹಣೆಗೆ ಚುಂಬಿಸಿದ್ದಾಳೆ. ಎದೆ ನಡುಗಿಸುವಂತಹ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯ್ಯಲ್ಲೊಂದು ಕಪ್ಪು ಬಟ್ಟೆ ಹಿಡಿದು ಹಾವಿನ ಗಮನವನ್ನು ಅದರೆಡೆಗೆ ಸೆಳೆಯಲು ಯತ್ನಿಸಿದ್ದಾಳೆ. ಹಾವಿನ ದೃಷ್ಟಿ ಅತ್ತ ಹೋಗ್ತಿದ್ದಂತೆ ಅದರ ತಲೆಗೆ ಮುತ್ತಿಟ್ಟಿದ್ದಾಳೆ. ವೇದಿಕೆಯೊಂದರ ಮೇಲೆ ನೂರಾರು ಜನರ ಎದುರಲ್ಲಿ ಇಂಥಾ ದುಸ್ಸಾಹಸವನ್ನು ಮಾಡಿದ್ದಾಳೆ. ಹುಡುಗಿಯ ಧೈರ್ಯ ನೋಡಿ ವೇದಿಕೆಯಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿದ್ದಾರೆ.