ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾದ ಬಳಿಕ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ತಮ್ಮ ಮೇಲೆ ಇರುವ ಆರೋಪಗಳ ಕುರಿತಂತೆ ಮೌನ ಮುರಿದಿದ್ದಾರೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಪಲಾಯನದ ವಿಚಾರದಲ್ಲಿ ಕೇಂದ್ರ ಸರ್ಕಾರ ಆಯೋಗ ರಚಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಶ್ಮೀರಿ ಪಂಡಿತರ ವಿಚಾರದಲ್ಲಿ ಸತ್ಯಾಂಶ ತಿಳಿದುಕೊಳ್ಳಬೇಕು ಎಂದಿದ್ದರೆ ನೀವು ಆಯೋಗವನ್ನು ರಚಿಸಿ. ಆಯೋಗದ ಮೂಲಕ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರು ಯಾರೆಂದು ತಿಳಿದುಕೊಳ್ಳಿ. ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸುವವರೇ ಆಗಿದ್ದರೆ ನೀವು ಆಯೋಗವನ್ನು ರಚಿಸಲೇಬೇಕು ಎಂದಿದ್ದಾರೆ.
ಕಾಶ್ಮೀರಿ ಪಂಡಿತರ ಪಲಾಯನಕ್ಕೆ ನನ್ನ ತಂದೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕಾರಣರಲ್ಲ ಎಂದು ಹೇಳಿರುವ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿಕೆಯ ವಿರುದ್ಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ನಿನ್ನೆ ಪ್ರತಿಭಟಿಸಿದ್ದಾರೆ.