ರಾಜ್ಯ ಸರ್ಕಾರ, ಕರ್ನಾಟಕ – ಭಾರತ್ ಗೌರವ ಕಾಶಿ ದರ್ಶನ ಯೋಜನೆ ಆರಂಭಿಸಿದ್ದು, ನವೆಂಬರ್ 11 ರಿಂದ ಇದು ಪ್ರಾರಂಭವಾಗಲಿದೆ. ಈ ಯೋಜನೆ ಅಡಿ ಪ್ರತಿ ಯಾತ್ರಾರ್ಥಿಗೆ 5000 ರೂಪಾಯಿಗಳ ಸಹಾಯಧನ ಸಿಗಲಿದ್ದು, ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.
ಅತಿ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆ ರಾಮಲಲ್ಲಾ ಮತ್ತು ಪ್ರಯಾಗ್ ರಾಜ್ ದೇವ ಭೂಮಿಗಳ ವೈಭವ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದ್ದು, 8 ದಿನಗಳ ಕಾಲ ಊಟ, ತಿಂಡಿ, ವಸತಿ, ದರ್ಶನಗಳನ್ನು ಈ ವಿಶೇಷ ರೈಲು ಟೂರ್ ಪ್ಯಾಕೇಜ್ ಒಳಗೊಂಡಿದೆ.
ರೈಲು ಟೂರ್ ಪ್ಯಾಕೇಜ್ ಇದರ 15000 ರೂಪಾಯಿಗಳಾಗಿದ್ದು, ಐಆರ್ಸಿಟಿಸಿ ಹಾಗೂ ಐಟಿಎಂಎಸ್ ವೆಬ್ ಸೈಟ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ರೈಲು ಹತ್ತುವ ಹಾಗೂ ಇಳಿಯುವ ನಿಲ್ದಾಣಗಳಾಗಿವೆ.