alex Certify ‘ಕೊರೊನಾ’ ಕಾಲರ್ ಟ್ಯೂನ್ ನಿಂದ ಬೇಸತ್ತಿದ್ದವರಿಗೆ ಇಲ್ಲಿದೆ ಭರ್ಜರಿ ಖುಷಿ ಸುದ್ದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಕಾಲರ್ ಟ್ಯೂನ್ ನಿಂದ ಬೇಸತ್ತಿದ್ದವರಿಗೆ ಇಲ್ಲಿದೆ ಭರ್ಜರಿ ಖುಷಿ ಸುದ್ದಿ…!

ಯಾರಿಗಾದ್ರೂ ಫೋನ್ ಕರೆ ಮಾಡಿದಾಗ ಸಾಂಕ್ರಾಮಿಕ ರೋಗದ ಬಗ್ಗೆ ಪ್ರಕಟಣೆ ಕೇಳಿಬರುತ್ತವೆ. ಇದು ಕಳೆದ ಎರಡು ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. ಇದರಿಂದ ಜನತೆ ಬೇಸತ್ತು ರೋಸಿ ಹೋಗಿದ್ದಾರೆ. ಇದೀಗ ಕೊರೋನಾ ಜಾಗೃತಿಯ ಕರೆ ಆಡಿಯೋ ಪ್ರಕಟಣೆಗಳನ್ನು ಕೇಂದ್ರ ಸರ್ಕಾರ ಕೈ ಬಿಡುವ ಸಾಧ್ಯತೆಯಿದೆ.

ನೀವು ಕರೆ ಮಾಡಿದಾಗ ಫೋನ್ ರಿಂಗಣಿಸುವ ಬದಲು ಕೆಮ್ಮುತ್ತಿರುವ ಶಬ್ಧ ನೀವು ಕೇಳುತ್ತೀರಿ. ಜಗತ್ತಿನಾದ್ಯಂತ ಕೋವಿಡ್-19 ರೋಗಕ್ಕೆ ಕಾರಣವಾಗುವ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ಸೋಂಕಿನ ಬಗ್ಗೆ ಸಂದೇಶವೊಂದು ಪ್ಲೇ ಆಗತೊಡಗುತ್ತೆ. ಅಲ್ಲದೆ ಕೊರೋನಾ ಲಸಿಕೆಯ ಬಗ್ಗೆಯೂ ಕೂಡ ಜಾಗೃತಿ ಕರೆ ಆಡಿಯೋ ಪ್ಲೇ ಆಗುತ್ತಿವೆ.

ಜಿಯೋ, ವೊಡಾಫೋನ್, ಏರ್‌ಟೆಲ್ ಅಥವಾ ಇತರ ಯಾವುದೇ ಟೆಲಿಕಾಂ ಕಂಪನಿಯಿಂದ ಸಿಮ್ ಕಾರ್ಡ್ ಅನ್ನು ಬಳಸುವ ಗ್ರಾಹಕರೆಲ್ಲರಿಗೂ ಈ ಸಂದೇಶ ಪ್ಲೇ ಆಗುತ್ತವೆ. ಅರ್ಜೆಂಟ್ ಆಗಿ ಫೋನ್ ಮಾಡಬೇಕು ಎಂದಾದಾಗ ಈ ಸಂದೇಶ ಕೇಳಿಕೇಳಿ ಕೆಲವರು ಬೇಸತ್ತು ಹೋಗಿದ್ದಾರೆ.

ಇದೀಗ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಸುಮಾರು ಎರಡು ವರ್ಷಗಳ ನಂತರ ಈ ಆಡಿಯೋವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತುರ್ತು ಸಂದರ್ಭಗಳಲ್ಲಿ ನಿರ್ಣಾಯಕ ಕರೆಗಳನ್ನು ವಿಳಂಬಗೊಳಿಸುತ್ತಿವೆ ಎಂಬ ದೂರು ಕೇಳಿ ಬಂದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ದೂರಸಂಪರ್ಕ ಇಲಾಖೆಯು ಈ ಪೂರ್ವ ಕರೆ ಪ್ರಕಟಣೆಗಳು ಮತ್ತು ಕಾಲರ್ ಟ್ಯೂನ್‌ಗಳನ್ನು ಕೈಬಿಡುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿ ತಿಳಿಸಿದೆ.

ಗ್ರಾಹಕರು ತುರ್ತು ಕರೆಗಳನ್ನು ಮಾಡಬೇಕಾದಾಗ ಅಡಚಣೆಯಾಗಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸಲು ಅನೇಕರು ದೂರು ಸಲ್ಲಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಆರ್‌ಟಿಐ ಮೂಲಕ ಆರ್‌ಬಿಟಿಗಳನ್ನು (ರಿಂಗ್ ಬ್ಯಾಕ್ ಟೋನ್) ನಿಷ್ಕ್ರಿಯಗೊಳಿಸಲು ವಿನಂತಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...