ಕರ್ನಾಟಕ ಹಲವು ವಿಚಾರಗಳಲ್ಲಿ ಇತರೆ ರಾಜ್ಯಗಳನ್ನು ಹಿಂದಿಕ್ಕಿದೆ. ಇದೀಗ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಲಭಿಸಿದ್ದು, ಕರ್ನಾಟಕ ಶೈಕ್ಷಣಿಕ ಕೇಂದ್ರ ಎನ್ನುವ ಹಿರಿಮೆಯನ್ನು ಗಳಿಸಿದೆ.
ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಆದರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಅಲ್ಲಿ ಹೆಚ್ಚು ಕಾಲೇಜುಗಳಿರುವುದು ಸಹಜ ಸಂಗತಿಯಾಗಿದೆ. ಇನ್ನು ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಟಾಪ್ ಟೆನ್ ರಾಜ್ಯಗಳ ಪಟ್ಟಿ ಇಂತಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ ಮತ್ತು ಕೇರಳ.
ಕರ್ನಾಟಕದಲ್ಲಿ ಒಟ್ಟು 4,233 ಕಾಲೇಜುಗಳಿದ್ದು, ಪ್ರತಿಯೊಂದು ಲಕ್ಷಕ್ಕೆ 62 ಕಾಲೇಜುಗಳು ಇದ್ದಂತಾಗಿದೆ. ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ 8,114 ಹಾಗೂ ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 4,532 ಕಾಲೇಜುಗಳಿವೆ.