alex Certify ಕಾಲೇಜಿನಲ್ಲಿ ʼಸೌಂದರ್ಯʼದ ರಾಣಿ ನೀವಾಗಬೇಕಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲೇಜಿನಲ್ಲಿ ʼಸೌಂದರ್ಯʼದ ರಾಣಿ ನೀವಾಗಬೇಕಾ……?

ಕಾಲೇಜಿಗೆ ಹೋಗುವಾಗ ನೀವು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತಿರಾ? ಎಲ್ಲರೂ ನಿಮ್ಮನ್ನು ಗಮನಿಸಬೇಕು ಎಂಬುದು ನಿಮ್ಮ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ.

ರೋಸ್ ವಾಟರ್ ಒಂದನ್ನು ನಿಮ್ಮ ಬ್ಯಾಗ್ ನಲ್ಲೇ ಇಟ್ಟುಕೊಳ್ಳಿ. ಕಾಲೇಜಿಗೆ ಹೋಗುವ ಮುನ್ನ ಮುಖಕ್ಕೆ ರೋಸ್ ವಾಟರ್ ಸಿಂಪಡಿಸಿಕೊಳ್ಳಿ, ಇದರಿಂದ ನಿಮ್ಮ ಮುಖದ ತಾಜಾತನ ಹಾಗೆಯೇ ಇರುತ್ತದೆ. ಅಗಾಗ ಮುಖಕ್ಕೆ ರೋಸ್ ವಾಟರ್ ಸಿಂಪಡಿಸುವುದರಿಂದ ತ್ವಚೆ ಫ್ರೆಶ್ ಅಗಿಯೇ ಇರುತ್ತದೆ ಎಂಬುದನ್ನು ಸೌಂದರ್ಯ ಸಲಹಾ ತಜ್ಞರೂ ದೃಢಪಡಿಸಿದ್ದಾರೆ.

ನಿಮ್ಮ ದೇಹಕ್ಕೆ, ಬಣ್ಣಕ್ಕೆ, ಆಕಾರಕ್ಕೆ ಹೊಂದಿಕೊಳ್ಳುವ ಧಿರಿಸನ್ನೇ ಧರಿಸಿ. ಚೆನ್ನಾಗಿದೆ ಎಂಬ ಕಾರಣಕ್ಕೆ ನಿಮಗೆ ಹೊಂದಿಕೊಳ್ಳದ ಉಡುಪನ್ನು ಖರೀದಿಸದಿರಿ. ಟ್ರೆಂಡಿಂಗ್ ಕಲರ್ ಇದ್ದು ನಿಮಗೆ ಸೂಟ್ ಆಗುವ ಸ್ಟೈಲಿಶ್ ಉಡುಪನ್ನೇ ಆಯ್ದುಕೊಳ್ಳಿ.

ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಟ್ರೆಂಡಿಯಾಗಿರುವ ಬ್ಯಾಗ್ ಅನ್ನೇ ಆಯ್ದುಕೊಳ್ಳಿ. ಪುಸ್ತಕ ಹಿಡಿಯುವ ಜೊತೆಗೆ ಫ್ಯಾಶನ್ ಲುಕ್ ಕೊಡುವ ಬ್ಯಾಗ್ ಅನ್ನು ಅಯ್ಕೆ ಮಾಡಲು ಮರೆಯದಿರಿ.

ಇದರೊಂದಿಗೆ ಸ್ಟೈಲಿಶ್ ಹೇರ್ ಕಟ್, ಆಯಾ ಉಡುಪಿಗೆ ಹೊಂದಿಕೊಳ್ಳುವ ಚಪ್ಪಲಿ ಅಯ್ಕೆ ಮಾಡಿ. ಕಾಲೇಜಿನ ಬ್ಯೂಟಿ ಕ್ವೀನ್ ಎನಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...