
ಕೆಲವರು ರಾತ್ರಿ ಮಲಗುವ ವೇಳೆ ಕಾಲು ಸೆಳೆತ ಹಾಗೂ ನೋವು ಎಂದು ಹೇಳಿ ವಿಪರೀತ ಒದ್ದಾಡುವುದನ್ನು ನೀವು ಕಂಡಿರಬಹುದು. ಕಾಲು ನೋವಿಗೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಬೆಚ್ಚಗಿನ ನೀರಿಗೆ ಒಂದು ಮುಷ್ಟಿ ಉಪ್ಪು ಹಾಕಿ ನಿಮ್ಮ ಕಾಲನ್ನು ಅದರಲ್ಲಿ ಇಳಿಬಿಡಿ. ಹದಿನೈದು ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಕಾಲನ್ನು ಹೊರತೆಗೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ವಾರದ ತನಕ ಹೀಗೆ ಮಾಡುವುದರಿಂದ ನಿಮ್ಮ ಕಾಲು ನೋವು ಸಹಜವಾಗಿಯೇ ಕಡಿಮೆಯಾಗುತ್ತದೆ.
ಮಲಗುವ ಮುನ್ನ ಕಾಲಿಗೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ ಕವರ್ ಕಟ್ಟಿ ಮಲಗಿ. ಮರುದಿನ ಬೆಳಗ್ಗೆದ್ದು ಬೆಚ್ಚಗಿನ ನೀರಿನಿಂದ ಶಾಖ ಕೊಡಿ. ಹೀಗೆ ಮಾಡಿದರೂ ಕಾಲಿನ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಸಾಕಷ್ಟು ಪ್ರಮಾಣದ ತರಕಾರಿ ಹಾಗೂ ಹಣ್ಣುಗಳನ್ನು ನಿಮ್ಮ ಊಟದಲ್ಲಿ ಸೇವಿಸಿ. ಕ್ಯಾಲ್ಸಿಯಂ ಪ್ರಮಾಣ ದೇಹದಲ್ಲಿ ಕಡಿಮೆಯಾದರೂ ಹೀಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಹಣ್ಣು ಹಾಲುಗಳನ್ನು ಧಾರಾಳವಾಗಿ ಸೇವಿಸಿ.