ದುಬಾರಿ ಹಣ ಕೊಟ್ಟು ತಂದ ಶೂ ಮಕ್ಕಳು ಕಾಲಿಗೆ ಕಚ್ಚುತ್ತದೆ ಎಂಬ ಕಾರಣಕ್ಕೆ ದೂರವಿಟ್ಟರೆ ಏನು ಮಾಡುವುದೆಂಬ ಗೊಂದಲ ನಿಮ್ಮನ್ನೂ ಕಾಡಿದೆಯೇ? ಹತ್ತು ನಿಮಿಷದಲ್ಲಿ ಶೂ ವಿನ ಕಚ್ಚುವ ಗುಣವನ್ನು ಹೋಗಲಾಡಿಸಬಹುದು. ಹೇಗೆಂದಿರಾ?
ಚಪ್ಪಲಿ ಅಥವಾ ಶೂ ಸರಿಯಾದ ಜಾಗದಲ್ಲಿ ಸರಿಯಾಗಿ ಕುಳಿತುಕೊಳ್ಳದಿದ್ದರೆ ಈ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ಚಪ್ಪಲಿಯ ಒಳಭಾಗದ ಅಂಚುಗಳು ಮುಳ್ಳಿನಂತೆ ಅಲ್ಲೇ ಉಳಿದುಕೊಂಡಿರುವುದರಿಂದಲೂ ಈ ಕಚ್ಚುವಿಕೆ ಉಂಟಾಗಬಹುದು. ಅವುಗಳನ್ನು ಕತ್ತರಿಸಿದ ಬಳಿಕವೇ ಧರಿಸುವುದು ಅತ್ಯುತ್ತಮ ವಿಧಾನ.
ಮಕ್ಕಳಿಗೆ ಶೂ ಕೊಳ್ಳುವಾಗ ಅವರನ್ನು ಕಡ್ಡಾಯವಾಗಿ ಅಂಗಡಿಗೆ ಕರೆದೊಯ್ಯಬೇಕು. ಅವರ ಪಾದಕ್ಕೆ ಸೂಕ್ತವಾದುದನ್ನೇ ಕೊಳ್ಳಬೇಕು. ಹೊಸ ಚಪ್ಪಲಿ ಮೊದಲ ಬಾರಿಗೆ ಧರಿಸುವಾಗ ಕಾಲಿಗೆ ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್ ಹಚ್ಚಿಕೊಳ್ಳಿ. ಒಂದೆರಡು ದಿನ ಹೀಗೆ ಮಾಡುವುದರಿಂದ ಚಪ್ಪಲಿಯ ಕಚ್ಚುವ ಗುಣ ಇಲ್ಲವಾಗುತ್ತದೆ. ಸಾಕ್ಸ್ ಧರಿಸಿಯೇ ಶೂ ಹಾಕಿ.