ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕಾಲುಂಗುರ ಧರಿಸ್ತಾರೆ. ಇದು ಹದಿನಾರು ಶೃಂಗಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ವಿವಾಹಿತ ಮಹಿಳೆಯರು ಕಾಲಿಗೆ ಕಾಲುಂಗುರ ಧರಿಸುವುದ್ರಿಂದ ಜೀವನದಲ್ಲಿ ಅದೃಷ್ಟ ದೊರೆಯುತ್ತದೆ. ಪತಿ ದೀರ್ಘಾಯುಷ್ಯಿಯಾಗುವ ಜೊತೆಗೆ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಆದ್ರೆ ಈ ಕಾಲುಂಗುರ ಧರಿಸುವ ವೇಳೆ ಕೆಲ ತಪ್ಪುಗಳನ್ನು ಮಾಡಬಾರದು.
ಎಂದಿಗೂ ಮಹಿಳೆಯರು ಬಂಗಾರದ ಕಾಲುಂಗುರವನ್ನು ಧರಿಸಬಾರದು. ಭಗವಂತ ವಿಷ್ಣುವಿನ ಇಷ್ಟದ ಲೋಹ ಚಿನ್ನ. ಬಂಗಾರವನ್ನು ಲಕ್ಷ್ಮಿ ರೂಪವೆಂದೂ ಹೇಳಲಾಗುತ್ತದೆ. ಹಾಗಿರುವಾಗ ಅದನ್ನು ಕಾಲಿಗೆ ಹಾಕುವುದು ಒಳಿತಲ್ಲ. ಇದ್ರಿಂದ ಲಕ್ಷ್ಮಿ ಕೋಪಗೊಳ್ಳುವ ಜೊತೆಗೆ ಧನ ಹಾನಿಯಾಗುತ್ತದೆ.
ಹಾಗೆ ಎಂದಿಗೂ ಕಾಲುಂಗುರವನ್ನು ಬೇರೆಯವರಿಗೆ ನೀಡಬಾರದು. ಹಾಗೆ ಬೇರೆಯವರ ಕಾಲುಂಗುರವನ್ನು ಧರಿಸಬಾರದು. ಇದ್ರಿಂದ ದೌರ್ಭಾಗ್ಯ ಬರುವ ಜೊತೆಗೆ ಪತಿ ಆರ್ಥಿಕ ನಷ್ಟಕ್ಕೆ ಒಳಗಾಗ್ತಾನೆಂದು ಹೇಳಲಾಗುತ್ತದೆ.
ಹಾಗೆಯೇ ಮಹಿಳೆಯರು ಶಬ್ಧ ಬರುವ ಕಾಲುಂಗುರವನ್ನು ಎಂದಿಗೂ ಧರಿಸಬಾರದು. ಪತಿ ಸಾಲ ಹೆಚ್ಚಾಗುವ ಜೊತೆಗೆ ಮನೆಯಲ್ಲಿ ಖರ್ಚು ಜಾಸ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಕಾಲುಂಗುರ ಧರಿಸುವ ವೇಳೆ ಅದನ್ನು ಗಮನಿಸಬೇಕು. ಮುರಿದ ಅಥವಾ ತುಂಡಾದ ಕಾಲುಂಗುರವನ್ನು ಎಂದಿಗೂ ಧರಿಸಬಾರದು. ಇದು ಪತಿಗೆ ಅಪಶಕುನವಿದ್ದಂತೆ. ಇದ್ರಿಂದ ಪತಿಯ ವೃತ್ತಿ ಮೇಲೆ ಪರಿಣಾಮ ಬೀರುತ್ತದೆ.
ಕಾಲುಂಗುರ ಧರಿಸಲು ಹೆಬ್ಬೆರಳಿನ ಪಕ್ಕದ ಬೆರಳು ಸೂಕ್ತವಾದದ್ದು. ಬೇರೆ ಬೆರಳಿಗೆ ಕಾಲುಂಗುರ ಹಾಕಬಹುದು. ಆದ್ರೆ ಹೆಬ್ಬೆರಳಿನ ಪಕ್ಕದ ಬೆರಳಿಗೆ ಅವಶ್ಯಕವಾಗಿ ಹಾಕಬೇಕು.