ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿವೆ. ಬಂಗಾರವನ್ನು ಕಾಲಿಗೆ ಧರಿಸುವುದು ಶುಭವಲ್ಲ ಎಂಬ ನಂಬಿಕೆಯೂ ಇದೆ. ಭಗವಂತ ಶ್ರೀಕೃಷ್ಣನಿಗೆ ಹಳದಿ ಬಣ್ಣ ಪ್ರಿಯವಂತೆ. ಬಂಗಾರ ಹಳದಿ ಬಣ್ಣದಲ್ಲಿರುತ್ತದೆ. ಹಾಗಾಗಿ ಬಂಗಾರವನ್ನು ಕಾಲಿಗೆ ಧರಿಸಬಾರದು. ಬಂಗಾರವನ್ನು ಕಾಲಿಗೆ ಧರಿಸಿದ್ರೆ ಕೃಷ್ಣ ಕೋಪಗೊಳ್ತಾನೆ ಎಂದು ನಂಬಲಾಗಿದೆ.
ಕಾಲಿಗೆ ಬಂಗಾರ ಹಾಕಬಾರದು ಎಂಬುದಕ್ಕೆ ಇನ್ನೂ ಅನೇಕ ಧಾರ್ಮಿಕ ಕಾರಣಗಳಿವೆ. ಹಾಗೆ ವೈಜ್ಞಾನಿಕ ಕಾರಣಗಳನ್ನೂ ಹೇಳಲಾಗಿದೆ. ವಿಜ್ಞಾನಿಗಳು ಕೂಡ ಕಾಲಿಗೆ ಬಂಗಾರ ಅಥವಾ ಬಂಗಾರದಿಂದ ಮಾಡಿದ ಯಾವುದೇ ಆಭರಣವನ್ನು ಧರಿಸಬೇಡಿ ಎನ್ನುತ್ತಾರೆ.
ಬಂಗಾರ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಕಾಲಿಗೆ ಬಂಗಾರ ಅಥವಾ ಬಂಗಾರದ ಆಭರಣ ಹಾಕುವುದ್ರಿಂದ ಕಾಲಿನಿಂದ ತಲೆಯವರೆಗೆ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ಮಾನಸಿಕ ಏಕಾಗ್ರತೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಬಂಗಾರದ ಆಭರಣವನ್ನು ಕಾಲಿಗೆ ಹಾಕಬೇಡಿ ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ.
ಕಾಲಿಗೆ ಬೆಳ್ಳಿ ಆಭರಣವನ್ನು ಅವಶ್ಯವಾಗಿ ಧರಿಸಬೇಕು. ಇದು ಬೆನ್ನು, ಮಂಡಿ, ಕೀಲು ನೋವು ಕಡಿಮೆಯಾಗುತ್ತದೆ. ಬೆಳ್ಳಿ ಕಾಲಿಗೆ ಉಜ್ಜುವುದ್ರಿಂದ ಮೂಳೆಗಳು ಬಲ ಪಡೆಯುತ್ತವೆ. ಹಾಗಾಗಿಯೇ ಕಾಲಿಗೆ ಬೆಳ್ಳಿ ಧರಿಸಬೇಕೆಂದು ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ.