
ಬೈಕ್ ಸವಾರನ ಕಾಲಿಗೆ ಗುಂಡು ಹಾರಿಸಿ 5 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಉತ್ತರ ದೆಹಲಿಯ ರೂಪ್ ನಗರದಲ್ಲಿ ನಡೆದಿರೋ ದುಷ್ಕೃತ್ಯ ಇದು. 42 ವರ್ಷದ ವ್ಯಕ್ತಿಯ ಬಲಗಾಲಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ. ಮಾಲೀಕನಿಗೆ ತಲುಪಿಸಬೇಕಾಗಿದ್ದ ಹಣವನ್ನು ಹನ್ನಿಕುಮಾರ್ ಕಲ್ರಾ ಎಂಬಾತ ಮೋಟಾರ್ ಸೈಕಲ್‌ನಲ್ಲಿ ಕೊಂಡೊಯ್ಯುತ್ತಿದ್ದ. ಕೀರ್ತಿನಗರದ ಪ್ಲಾಸ್ಟಿಕ್ ಗ್ರ್ಯಾನ್ಯೂಲ್ಸ್ ವ್ಯಾಪಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್, ಹಣ ಪಡೆದು ಕಚೇರಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತರು ಕುಮಾರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಆತನ ಬಳಿಯಿದ್ದ 5 ಲಕ್ಷ ರೂಪಾಯಿಯನ್ನು ಕಸಿದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಘಟನೆ ಬಗ್ಗೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಗುಂಡೇಟು ತಿಂದು ಗಾಯಗೊಂಡಿದ್ದ ಕುಮಾರ್‌ನನ್ನು ಪೊಲೀಸರು ಹತ್ತಿರದ ಆಸ್ಪತ್ರೆದೆ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ ಹಾಗೂ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದ್ರೆ ಇದುವರೆಗೂ ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿಲ್ಲ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಕುಮಾರ್ ಹಣ ತೆಗೆದುಕೊಂಡು ಬರುತ್ತಿರುವ ವಿಚಾರ ತಿಳಿದು ಯಾರೋ ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಗಿದೆ. ದರೋಡೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.