ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪುದಾರ ಕಟ್ಟುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಕಪ್ಪುದಾರ ಕಟ್ಟುವುದ್ರಿಂದ ಸಾಕಷ್ಟು ಲಾಭವಿದೆ. ಸುತ್ತಲಿನ ನಕಾರಾತ್ಮಕ ಶಕ್ತಿ ದೂರವಾಗುವ ಜೊತೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಆದ್ರೆ ಕಪ್ಪು ದಾರ ಕಟ್ಟುವ ಮೊದಲು ಕೆಲವೊಂದು ಮುನ್ನೆಚ್ಚರಿಕೆ ವಹಿಸಬೇಕು.
ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸೇರಿದಂತೆ ಶನಿದೋಷ ನಿವಾರಣೆಗೆ ಕಪ್ಪುದಾರವನ್ನು ಕಟ್ಟಲಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳಿಗೆ ಕಪ್ಪು ದಾರವನ್ನು ಧರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ-ಮೆಣಸಿನಕಾಯಿಯನ್ನು ಕಪ್ಪು ದಾರದಲ್ಲಿ ಕಟ್ಟಿ ಮನೆಯ ಮುಖ್ಯ ಬಾಗಿಲಿಗೆ ಹಾಕಲಾಗುತ್ತದೆ.ಮನೆ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.
ಕಪ್ಪುದಾರವನ್ನು ಕಟ್ಟುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕು. ಕಪ್ಪು ದಾರವನ್ನು ಮಂತ್ರಿಸಿ ಕಟ್ಟಿಕೊಳ್ಳುವುದು ಉತ್ತಮ. ಇದಕ್ಕೆ ಅರ್ಹ ಜ್ಯೋತಿಷಿಗಳ ಸಲಹೆ ಕೇಳಬೇಕು. ಕಪ್ಪುದಾರ ಕಟ್ಟುವ ಮೊದಲು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಕಪ್ಪುದಾರ ಕಟ್ಟಿದಾಗ ದೇಹದ ಬೇರೆ ಭಾಗಕ್ಕೆ ಬೇರೆ ಬಣ್ಣದ ದಾರವನ್ನು ಕಟ್ಟಬಾರದು. ಶನಿವಾರ ಕಪ್ಪುದಾರವನ್ನು ಕಟ್ಟುವುದು ಶುಭ.