ಕಾನೂನು ಎಷ್ಟೆ ಕಟ್ಟುನಿಟ್ಟಾಗಿದ್ದರೂ, ನಡೀತಾ ಇರೋ ಅಪರಾಧ ಪ್ರಮಾಣ ಮಾತ್ರ ಕಡಿಮೆ ಆಗ್ತಿಲ್ಲ. ಈಗ ಮತ್ತೆ ದೇಶ ಬೆಚ್ಚಿಬೀಳುವಂತಹ ಘಟನೆ ಹೈದ್ರಾಬಾದ್ನಲ್ಲಿ ನಡೆದಿದೆ.
ಅದು ಹೈದ್ರಾಬಾದ್ನ ಐಶಾರಾಮಿ ಪ್ರದೇಶ ಜುಬಿಲಿ ಹಿಲ್ಸ್. ಇದೇ ಹೈ ಸೊಸೈಟಿಯಲ್ಲಿರೋ ಕೆಲವರು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ದುಷ್ಕೃತ್ಯವನ್ನ ಮಾಡಿರೋದು 3-4 ಜನ ಅಂತ ಹೇಳಲಾಗುತ್ತಿದೆ. ಅದರಲ್ಲಿ ಓರ್ವ ಶಾಸಕನ ಪುತ್ರ ಅಂತಾನೂ ಹೇಳಲಾಗುತ್ತಿದೆ. ಸದ್ಯಕ್ಕೆ ಜುಬಿಲಿ ಹಿಲ್ಸ್ ಪೊಲೀಸರು ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ ಕೊಟ್ಟ ದೂರನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರೋ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 354, 323 ಐಪಿಸಿ, 9,10 ಪೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ 17 ವರ್ಷದ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
BIG NEWS: ಶಾಸಕನ ಪುತ್ರ ಸೇರಿ ಐವರಿಂದ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್; ಕಾರಿನಲ್ಲಿ ಪೈಶಾಚಿಕ ಕೃತ್ಯ
ಮೂಲಗಳ ಪ್ರಕಾರ, ಸಂತ್ರಸ್ತೆ ತನ್ನ ಸ್ನೇಹಿತರ ಆಹ್ವಾನದ ಮೇರೆಗೆ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಜುಬಿಲಿ ಹಿಲ್ಸ್ಗೆ ಬಂದಿದ್ದಳು ಅನ್ನಲಾಗುತ್ತಿದೆ. ಆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶಾಸಕರ ಪುತ್ರ ಹಾಗೂ ಅಲ್ಪಸಂಖ್ಯಾತರ ಮಂಡಳಿ ಅಧ್ಯಕ್ಷರು ಕೂಡಾ ಹಾಜರಿದ್ದರು. ಈಗ ಸಂತ್ರಸ್ತೆಗೆ ಒಬ್ಬ ಆರೋಪಿ ಹೊರತುಪಡಿಸಿ ಇನ್ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಅತ್ಯಾಚಾರ ಮಾಡಿರೋ ಆರೋಪಿಗಳಲ್ಲಿ ಓರ್ವ ಅಪ್ರಾಪ್ತ ಬಾಲಕನು ಕೂಡಾ ಇದ್ದ ಅಂತ ಹೇಳಲಾಗಿದೆ.
ಜುಬಿಲಿ ಹಿಲ್ಸ್ನ ಮುಖ್ಯ ರಸ್ತೆ 36ರಲ್ಲಿ ಇರುವ ಆಮ್ನೆಶಿಯಾ & ಇನ್ಸೋಮ್ನಿಯಾ ಪಬ್ನಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಈ ಬರ್ತಡೇ ಪಾರ್ಟಿಯನ್ನ ಸೂರಜ್ ಹಾಗೂ ಆದಿ ಸೇರಿಕೊಟ್ಟಿದ್ದರು. ಇದೇ ಪಾರ್ಟಿಯನ್ನ ಮುಗಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆಂಪುಬಣ್ಣದ ಮರ್ಸಿಡಿಸ್ ಕಾರೊಂದು ಬಂದು ಸಂತ್ರಸ್ತೆಯನ್ನ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಈಗ ಆಕೆಯ ಪರಿಸ್ಥಿತಿ ಗಂಭೀರವಾಗಿದೆ. ಈಗ ಆಕೆ ಈ ಘಟನೆ ಕುರಿತು ಸವಿಸ್ತಾರವಾಗಿ ಹೇಳಲು ಅಸಮರ್ಥಳಾಗಿದ್ದಾರೆ. ಆಕೆ ಕೊಂಚ ಚೇತರಿಸಿಕೊಂಡ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.