ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷರು ಏಪ್ರಿಲ್ 2ರಂದು ಮಾಡಿರೋ ಭಾಷಣದಲ್ಲಿ ಮತ್ತೊಮ್ಮೆ ಟೀಕೆಗಳನ್ನು ಎದುರಿಸಿದ್ದಾರೆ. ಯುಎಸ್ಎಸ್ ಡೆಲವೇರ್‌ನ ಕಮಿಷನಿಂಗ್ ಸ್ಮರಣಾರ್ಥ ಸಮಾರಂಭದಲ್ಲಿ, ಬಿಡೆನ್ ತನ್ನ ತಪ್ಪಿನಿಂದಾಗಿ ಮಿಶೆಲ್ ಒಬಾಮಾ ಅವರನ್ನು ಉಪಾಧ್ಯಕ್ಷೆ ಎಂದು ಉಲ್ಲೇಖಿಸಿದ್ದಾರೆ.
ಭಾಷಣದ ಸಮಯದಲ್ಲಿ, ಬಿಡೆನ್ ಅವರು ತಮ್ಮ ಪತ್ನಿ ಜಿಲ್ ಬಿಡೆನ್ ಅವರು ಮಾಡುತ್ತಿರುವ ಕೆಲಸಕ್ಕಾಗಿ ಕೃತಜ್ಞತೆಯನ್ನು ತಿಳಿಸಲು ಬಯಸಿದ್ದರು. ತಾನು ಉಪಾಧ್ಯಕ್ಷನಾಗಿದ್ದಾಗ ಮಿಶೆಲ್ ಒಬಾಮಾ ಅವರು ಮಾಡುತ್ತಿದ್ದ ಕೆಲಸದ ಬಗ್ಗೆ ತನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳುವ ಬದಲು, ಬಿಡೆನ್ ಮಿಶೆಲ್ ಒಬಾಮಾ ಅವರನ್ನು ಉಪಾಧ್ಯಕ್ಷೆ ಎಂದು ಉಲ್ಲೇಖಿಸಿದ್ದಾರೆ.
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕಮಲಾ ಹ್ಯಾರಿಸ್ ಅವರನ್ನು ಪ್ರಥಮ ಮಹಿಳೆ ಎಂದು ಹೇಳಿರುವುದು ಸೇರಿದಂತೆ, ಜೋ ಬಿಡೆನ್ ಈ ಹಿಂದೆ ಮಾಡಿರುವ ತಪ್ಪುಗಳನ್ನು ನೆಟ್ಟಿಗರು ಎತ್ತಿತೋರಿಸಿದ್ದಾರೆ.
ಅಂದಹಾಗೆ, ಈ ಸಂಬಂಧ ಶ್ವೇತಭವನದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ಭಾಷಣದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ದೋಷವನ್ನು ಸರಿಪಡಿಸಲಾಗಿದೆ ಎಂದು ಹೇಳಿದೆ. ಇದು ಬಿಡೆನ್‌ನ ಕಡೆಯಿಂದ ದುರದೃಷ್ಟಕರ ತಪ್ಪು ಎಂದು ಸಾಬೀತುಪಡಿಸುತ್ತದೆ.