2019-20ನೇ ಸಾಲಿನಲ್ಲಿ ಆಡಳಿತಾರೂಡ ಬಿಜೆಪಿಯು ಅತೀ ಹೆಚ್ಚು ಕಾರ್ಪೋರೇಟ್ ದೇಣಿಗೆಗಳನ್ನು ಸ್ವೀಕರಿಸಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಅತ್ಯಧಿಕ ಮೊತ್ತದ ಅಂದರೆ ₹921.95 ಕೋಟಿ ಕಾರ್ಪೋರೇಟ್ ದೇಣಿಗೆಯನ್ನು ಸಂಗ್ರಹಿಸಿದೆ. 2014-15ನೇ ಸಾಲಿನಲ್ಲಿ 573.18 ಕೋಟಿ ಕಾರ್ಪೋರೇಟ್ ನಿಧಿ ಸಂಗ್ರಹಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಟಿಸಿದ ತನ್ನ ವರದಿಯಲ್ಲಿ, 2019-20ರಲ್ಲಿ ರಾಜಕೀಯ ಪಕ್ಷಗಳ ಒಟ್ಟು ಕೊಡುಗೆಯಲ್ಲಿ ಕಾರ್ಪೊರೇಟ್ ನಿಧಿಗಳು 91% ರಷ್ಟಿದೆ ಎಂದು ಸೇರಿಸಲಾಗಿದೆ. ಅಧ್ಯಯನವು ಬಿಜೆಪಿ, ಕಾಂಗ್ರೆಸ್, ಸಿಪಿಐಎಂ, ಎನ್‌ಸಿಪಿ ಮತ್ತು ಟಿಎಂಸಿಯನ್ನು ಒಳಗೊಂಡಿದೆ.
2019-20ರಲ್ಲಿ ಬಿಎಸ್ಪಿ ತಾನೂ 20 ಸಾವಿರ ರೂಪಾಯಿಗಳಿಗಿಂತ ಅಧಿಕ ಮೊತ್ತದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದ ಬಳಿಕ ಎಡಿಆರ್ನಿಂದ ಹೊರಬಿದ್ದಿದೆ. ಇನ್ನು ಸಿಪಿಐ ಕೂಡ ಯಾವುದೇ ಕಾರ್ಪೋರೇಟ್ ದೇಣಿಗೆಯನ್ನು ಘೋಷಿಸಿಲ್ಲ. ಭಾರತೀಯ ಚುನಾವಣಾ ಆಯೋಗದ ಕಾನೂನಿನ ಪ್ರಕಾರ 20 ಸಾವಿರಕ್ಕಿಂತ ಅಧಿಕ ಮೊತ್ತದ ಯಾವುದೇ ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅಗ್ರ ದಾನಿಯಾಗಿದೆ. ಬಿಜೆಪಿಗೆ ₹216.75 ಕೋಟಿ ಹಾಗೂ ಕಾಂಗ್ರೆಸ್‌ಗೆ ₹31 ಕೋಟಿ ಕೊಡುಗೆ ನೀಡಿದೆ. ಎನ್‌ಸಿಪಿ ಅಗ್ರ ದಾನಿ ಬಿ.ಜಿ. ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈ. ಲಿಮಿಟೆಡ್, ಇದಕ್ಕೆ ₹25 ಕೋಟಿ ನೀಡಿದೆ. ಇತರ ದೊಡ್ಡ ದಾನಿಗಳಲ್ಲಿ, ಐಟಿಸಿ ಬಿಜೆಪಿಗೆ ₹ 55 ಕೋಟಿ ಮತ್ತು ಕಾಂಗ್ರೆಸ್‌ಗೆ ₹ 13.6 ಕೋಟಿ ಕೊಡುಗೆ ನೀಡಿದೆ.