ಲಕ್ಷ್ಮಿ ದೇವಿಯ ಅನುಗ್ರಹವಿದ್ದರೆ ಯಾವ ಕೆಲಸ ಮಾಡಿದರೂ ಅದರಿಂದ ಲಾಭವಾಗುತ್ತದೆ. ಹಣ ಗಳಿಸಲು ಸಾಧ್ಯ. ಹಾಗಾಗಿ ಪವಿತ್ರವಾದ ಈ ಕಾರ್ತಿಕ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಈ ರೀತಿ ಪೂಜಿಸಿದರೆ ಲಕ್ಷ್ಮಿ ಕೃಪೆ ನಿಮ್ಮ ಮೇಲಾಗುತ್ತದೆ.
ಕಾರ್ತಿಕ ಮಾಸದ ಶುಕ್ರವಾರದಂದು ಲಕ್ಷ್ಮೀದೇವಿಯ ಪೂಜೆ ಮಾಡುವ ಮೊದಲು ಮನೆಯನ್ನು ಕ್ಲೀನ್ ಮಾಡಿ. ಬಳಿಕ ವಿಷ್ಣುವಿನ ಕಾಲ ಬಳಿ ಕುಳಿತಿರುವ ಲಕ್ಷ್ಮೀದೇವಿಯ ಫೋಟೊ ಇಟ್ಟು ಬಿಳಿ, ಕೆಂಪು, ಹಳದಿ ಹೂಗಳಿಂದ ಅಲಂಕಾರ ಮಾಡಿ. ಹಾಗೇ ಒಂದು ಬಟ್ಟಲಿನಲ್ಲಿ ಅಕ್ಕಿ, ಕುಂಕುಮ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆಯನ್ನು ಇಟ್ಟು ಅದಕ್ಕೆ ಪೂಜೆ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.
ಹಾಗೇ ಮನೆಗೆ ಲಕ್ಷ್ಮೀದೇವಿಯನ್ನು ಮನೆಗೆ ಆಹ್ವಾನಿಸಲು ಮನೆಯ ಮುಖ್ಯ ದ್ವಾರಕ್ಕೆ ಹಾಗೂ ದೇವರ ಕೋಣೆಗೆ ಅಶೋಕ ಎಲೆಯ ಮಾಲೆಯನ್ನು ಹಾಕಿ. ಇದರಿಂದ ನಕರಾತ್ಮಕ ಶಕ್ತಿ ಹೊರಗೆ ಹೋಗಿ ಲಕ್ಷ್ಮಿ ಒಳಗೆ ಬರುತ್ತಾಳೆ. ಹಾಗೇ ಅಂದು ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಿ.