ಜುಲೈ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ತನ್ನ ಬಹುತೇಕ ಎಲ್ಲಾ ಪ್ರಯಾಣಿಕ ವಾಹನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. Tata Tiago, Tata Tigor, Tata Harrier, Tata Safari ಮತ್ತು Tata Nexon ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಅನ್ನು ಗ್ರಾಹಕರು ಪಡೆಯಬಹುದು.
ಈ ಕೊಡುಗೆಗಳು ವಿನಿಮಯ ರಿಯಾಯಿತಿ ಮತ್ತು ಗ್ರಾಹಕ ಯೋಜನೆಯ ಪ್ರಯೋಜನಗಳನ್ನು ಒಳಗೊಂಡಿವೆ. ಟಾಟಾ ಟಿಯಾಗೊದಲ್ಲಿ 20 ಸಾವಿರ ರೂಪಾಯಿಗಳವರೆಗೆ ಆಫರ್ ಇದೆ. ಆದಾಗ್ಯೂ, ಅದರ XE, XM ಮತ್ತು XT ರೂಪಾಂತರಗಳು ಕೇವಲ 10 ಸಾವಿರ ರೂಪಾಯಿಗಳ ಡಿಸ್ಕೌಂಟ್ ಹೊಂದಿವೆ. XZ ಮತ್ತು ಇತರ ಮಾಡೆಲ್‌ಗಳ ಮೇಲೆ 20 ಸಾವಿರ ರೂಪಾಯಿವರೆಗೂ ರಿಯಾಯಿತಿ ಸಿಕ್ತಾ ಇದೆ.
ಆದ್ರೆ ಇದರ CNG ರೂಪಾಂತರ ಕಾರಿಗೆ ಯಾವುದೇ ಆಫರ್‌ಗಳಿಲ್ಲ. ಇದಲ್ಲದೆ Tata Tigor ನ XE ಮತ್ತು XM ರೂಪಾಂತರಗಳ ಮೇಲೆ 10,000 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ XZ ಮಾಡೆಲ್‌ಗೆ 20 ರೂಪಾಯಿ ಡಿಸ್ಕೌಂಟ್ ಸಿಕ್ತಿದೆ. ಅದರ CNG ರೂಪಾಂತರದಲ್ಲಿ ಯಾವುದೇ ಕೊಡುಗೆ ಇಲ್ಲ.
ಟಾಟಾ ಹ್ಯಾರಿಯರ್‌ನ ಎಲ್ಲಾ ಮಾಡೆಲ್‌ಗಳ ಮೇಲೂ 40,000 ರೂಪಾಯಿವರೆಗಿನ ಕೊಡುಗೆಗಳು ಲಭ್ಯವಿದೆ. ಈ ಕೊಡುಗೆ ಕೂಡ ಎಕ್ಸ್‌ಚೇಂಜ್ ರಿಯಾಯಿತಿಯ ರೂಪದಲ್ಲಿದೆ. ಎಲ್ಲಾ ಹೊಸ ಹ್ಯಾರಿಯರ್ ಕಾರುಗಳು ಈಗ ಸುಧಾರಿತ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಟಾಟಾ ಹ್ಯಾರಿಯರ್ ಹೊರತಾಗಿ, ಟಾಟಾ ಸಫಾರಿ ಖರೀದಿಸುವವರಿಗೂ 40,000 ರೂಪಾಯಿವರೆಗಿನ ಕೊಡುಗೆಗಳನ್ನು ಕಂಪನಿ ನೀಡುತ್ತಿದೆ.
ಈ ಕಾರುಗಳ ಮೇಲೆ TOI ಯೋಜನೆ, ಟಾಪ್-10 ಕಾರ್ಪೊರೇಟ್ ಯೋಜನೆ, ಟಾಪ್-20 ಕಾರ್ಪೊರೇಟ್ ರಾಷ್ಟ್ರೀಯ ಯೋಜನೆ ಮತ್ತು ಕೋವಿಡ್ ಫೈಟರ್ ಸ್ಕೀಮ್ ಸೇರಿದಂತೆ ಕೆಲವು ರಿಯಾಯಿತಿ ಕೊಡುಗೆಗಳಿವೆ. ಆದಾಗ್ಯೂ ಈ ರಿಯಾಯಿತಿಗಳು ಅರ್ಹರಿಗೆ ಮಾತ್ರ ಅನ್ವಯವಾಗುತ್ತವೆ.
ಟಾಪ್-20 ಕಾರ್ಪೊರೇಟ್ ರಾಷ್ಟ್ರೀಯ ಯೋಜನೆ ಮತ್ತು ಕೋವಿಡ್ ಫೈಟರ್ ಸ್ಕೀಮ್ ಅಡಿಯಲ್ಲಿ ಟಾಟಾ ನೆಕ್ಸಾನ್‌ನಲ್ಲಿ ಕೇವಲ ಎರಡು ಕೊಡುಗೆಗಳು ಲಭ್ಯವಿವೆ. ಈ ಎರಡೂ ಯೋಜನೆಗಳ ಅಡಿಯಲ್ಲಿ, ಟಾಟಾ ನೆಕ್ಸಾನ್ ಮೇಲೆ 10 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಆದ್ರೆ ಪೆಟ್ರೋಲ್ ಮಾಡೆಲ್‌ಗೆ ಕೇವಲ 6 ಸಾವಿರ ರೂಪಾಯಿ ಡಿಸ್ಕೌಂಟ್ ಪ್ರಕಟಿಸಲಾಗಿದೆ.