ಮೋಟಾರು ವಾಹನ ಕಾಯಿದೆ, 1988ರ ಪ್ರಕಾರ, ನಿಮ್ಮ ಕಾರಿಗೆ ಮೂರನೇ ಪಾರ್ಟಿಯ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ನಿಮ್ಮ ಕಾರಿನಿಂದ ಮೂರನೇ ವ್ಯಕ್ತಿಗೆ ಆಗುವ ಹಾನಿಯನ್ನು ಈ ವಿಮೆ ಕಟ್ಟಿಕೊಡುತ್ತದೆ. ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಸೂಚನೆಗಳ ಅನುಸಾರ ಕಾರಿನ ಗಾತ್ರದ ಮೇಲೆ ಮೂರನೇ ಪಾರ್ಟಿ ವಿಮೆಯ ಪ್ರೀಮಿಯಂ ನಿರ್ಧಾರವಾಗುತ್ತದೆ.
ಸ್ವಯಂ ಹಾನಿ ವಿಮೆ
ಬಹಳ ಪ್ರಯೋಜನಕಾರಿಯಾದ ಈ ವಿಮೆಯು ಐಚ್ಛಿಕವಾದದ್ದಾಗಿದೆ. ಮಾನವನಿಂದ ಅಥವಾ ಪ್ರಾಕೃತಿಕ ವಿಪತ್ತುಗಳಿಂದಾಗುವ ಹಾನಿಯನ್ನು ಸ್ವಯಂ ಹಾನಿ ವಿಮೆ ಕಟ್ಟಿಕೊಡುತ್ತದೆ. ಪ್ರೀಮಿಯಂ ಮೊತ್ತವು ವಿಮಾ ಘೋಷಿತ ಮೌಲ್ಯಕ್ಕೆ (ಐಡಿವಿ) ಪರೋಕ್ಷ ಅನುಪಾತದಲ್ಲಿರುತ್ತದೆ. ನಿಮ್ಮ ಕಾರಿನ ವಯಸ್ಸು ಹೆಚ್ಚಾದಂತೆ ಅದರ ಐಡಿವಿ ಮೌಲ್ಯ ಕುಸಿಯುತ್ತಾ ಸಾಗುತ್ತದೆ. ಭಾರತೀಯ ಮೋಟಾರು ಸುಂಕ (ಐಎಂಟಿ) ನಿರ್ಧರಿಸಿದಂತೆ, ಸ್ವಯಂ ಹಾನಿ ವಿಮೆಯ ಪ್ರೀಮಿಯಂ ಅನ್ನು ಐಡಿವಿಯ ಒಂದು ಅನುಪಾತದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.
ಐಡಿವಿ ಲೆಕ್ಕಾಚಾರದ ಸೂತ್ರ ಇಂತಿದೆ:
ಐಡಿವಿ = ವಿಮೆಗೆ ಒಳಪಟ್ಟ ನಿಮ್ಮ ಕಾರಿನ ಶೋರೂಂ ಬೆಲೆ + ಅಕ್ಸೆಸರಿಗಳ ವೆಚ್ಚ – ಐಆರ್‌ಡಿಎಐ ನಿಗದಿತ ಸವಕಳಿ ಮೌಲ್ಯ
ಸ್ವಯಂ ಹಾನಿ ಪ್ರೀಮಿಯಂ = ಐಡಿವಿ * {ಪ್ರೀಮಿಯಂ ದರ (ವಿಮಾ ಸೇವಾದಾರ ನಿರ್ಧರಿಸಿದಂತೆ)} + {ಹೆಚ್ಚುವರಿಗಳು} – {ವಿನಾಯಿತಿಗಳು ಮತ್ತು ಪ್ರಯೋಜನಗಳು (ಕಳ್ಳತನದ ವಿನಾಯಿತಿ, ಕ್ಲೇಮ್ ರಾಹಿತ್ಯದ ಬೋನಸ್, ಇತರೆ}
ವೈಯಕ್ತಿಕ ಅಪಘಾತದ ವಿಮೆ
ಈ ವಿಮೆಯು ಅಪಘಾತಗಳು ಅಥವಾ ಕಾರಿನಲ್ಲಿ ಸಂಭವಿಸುವ ಇನ್ಯಾವ ರೀತಿಯ ದುರಂತದಿಂದಲೂ ನಿಮಗೆ ಆಗಬಹುದಾದ ಅಂಗ ವೈಕಲ್ಯತೆಗಳಿಗೆ ಪರಿಹಾರ ನೀಡುತ್ತದೆ. ವಿಮಾ ಪಾಲಿಸಿಯಲ್ಲಿ ಸೇರಿಸದೇ ಬಿಟ್ಟಿರುವ ಪ್ರಯಾಣಿಕರನ್ನೂ ಈ ವಿಮಾ ಮೊತ್ತ ಒಳಗೊಂಡಿರುತ್ತದೆ. ವಿಮಾ ಮೊತ್ತಕ್ಕನುಗುಣವಾಗಿ ಪ್ರೀಮಿಯಂ ಮೊತ್ತವೂ ಹೆಚ್ಚುತ್ತದೆ.