ಅಹಮದಾಬಾದ್: ಛಾಂದ್‍ಕೇಡಾ ಪ್ರದೇಶದಲ್ಲಿ ನೆರೆಯವರ ನಾಯಿಯು ತನ್ನ ಕಾರಿನ ಮೇಲೆ ಪದೇಪದೆ ಮೂತ್ರವಿಸರ್ಜನೆ ಮಾಡುವುದನ್ನು ಸಹಿಸಲಾಗದೆಯೇ 32 ವರ್ಷದ ಯುವಕ ಆಕ್ರೋಶಗೊಂಡ. ಸೀದಾ ಪಕ್ಕದ ಮನೆಗೆ ತೆರಳಿ ಗಲಾಟೆ ತೆಗೆದ. ಆದರೆ, ಕ್ಷಮೆ ಕೇಳಿ ಸಂತೈಸುವ ಬದಲು, ನಾಯಿಯ ಮಾಲೀಕರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪಾರ್ಥ ಅವೆನ್ಯೂ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಸೊಸೈಟಿಯಲ್ಲಿನ ಹಲವರೊಂದಿಗೆ ನಾಯಿ ಮಾಲೀಕರು ಗಲಾಟೆ ಮಾಡಿಕೊಂಡಿದ್ದಾರೆ ಎಂದು ಕೂಡ ತಿಳಿದುಬಂದ ಹಿನ್ನೆಲೆಯಲ್ಲಿ ಯುವಕ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.
150 ವರ್ಷ ಹಳೆಯ ಮದುವೆ ಪ್ರಮಾಣಪತ್ರವನ್ನು ವಾರಸುದಾರರಿಗೆ ಹಸ್ತಾಂತರಿಸಲು ಮುಂದಾದ ಸ್ಟೋರ್ ಸಿಬ್ಬಂದಿ
ಲಾಠಿಗಳನ್ನು ತಂದು ಯುವಕನನ್ನು ಬಡಿದಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಪೊಲೀಸರು ಥಳಿಸಿ ಜೋಡಿ ಸನ್ನಿ ಮತ್ತು ಆತನ ತಂದೆ ಚಿರಾಗ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.