ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಶನಿವಾರದಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ.
ಪ್ರಕರಣದ ವಿವರ: ಕಪ್ಪನಹಳ್ಳಿ ಗ್ರಾಮದ ಕೇಶವ ನಾಯ್ಡು ಎಂಬವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 5 ಲಕ್ಷ ರೂಪಾಯಿ ವಿತ್ ಡ್ರಾ ಮಾಡಿ ಅದನ್ನು ತಮ್ಮ ಕಾರಿನ ಸೀಟಿನಲ್ಲಿಟ್ಟು ಡಿಸಿಸಿ ಬ್ಯಾಂಕ್ ಒಳಗೆ ಹೋಗಿದ್ದರು.
ಇದೇ ಸಮಯ ಸಾಧಿಸಿದ ಕಳ್ಳರು ಗಾರಿನ ಗಾಜು ಒಡೆದು ಐದು ಲಕ್ಷ ರೂಪಾಯಿ ನಗದು ಎತ್ತಿಕೊಂಡು ಪರಾರಿಯಾಗಿದ್ದು, ಇದೀಗ ಘಟನೆ ಸಂಬಂಧ ಕೇಶವ ನಾಯ್ಡು, ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.