ಉನಾ: ಪ್ರಾಣಿಗಳ ವಿರುದ್ಧ ಕ್ರೌರ್ಯವನ್ನು ಬಿಂಬಿಸುವ ವಿಡಿಯೋಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಇದು ಜನರನ್ನು ಕೋಪೋದ್ರಿಕ್ತಗೊಳಿಸುತ್ತದೆ. ಅಲ್ಲದೆ ಇಂಥವುಗಳನ್ನು ವೀಕ್ಷಿಸಲು ತುಂಬಾ ಕಷ್ಟಕರವಾಗಿರುತ್ತದೆ.
ಹೋಳಿ ಹಬ್ಬದಂದು ಕೆಲವು ಯುವಕರು ನಾಯಿಯನ್ನು ಸರಪಳಿಯಿಂದ ಕಟ್ಟಿಹಾಕಿ ಬಣ್ಣ ಎರಚಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಇದು ಪ್ರಾಣಿ ಪ್ರಿಯರ ಕಣ್ಣನ್ನು ಕೆಂಪಗಾಗಿಸಿದ್ದು, ಹಲವಾರು ಮಂದಿ ಯುವಕರಿಗೆ ಛೀಮಾರಿ ಹಾಕಿದ್ದಾರೆ.
ಇದೀಗ, ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದ್ರೆ ಸಿಂಹವನ್ನು ನೋಡಿದ್ದಾನೆ. ನೋಡಿ ಸುಮ್ಮನಿರದ ಈತ ಮೂಕಪ್ರಾಣಿಯನ್ನು ಬೆನ್ನಟ್ಟಿದ್ದಾನೆ. ಈ ದೃಶ್ಯದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಗುಜರಾತ್‌ನ ಉನಾದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸಣ್ಣ ಕ್ಲಿಪ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನ ಮೂಲಕ ಕತ್ತಲೆ ತುಂಬಿರೋ ರಸ್ತೆಯಲ್ಲಿ ಸಿಂಹವನ್ನು ಬೆನ್ನಟ್ಟುತ್ತಿರುವುದನ್ನು ಕಾಣಬಹುದು. ಅಸಹಾಯಕ ಸಿಂಹವು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿದೆ. ಹಾಗೂ ಅದು ಭೀತಿಗೊಂಡಿದೆ. ಬಡ ಪ್ರಾಣಿ ಎತ್ತ ಕಡೆ ಓಡಿದ್ರೂ ಕಾರು ಚಾಲಕ ಅದರತ್ತ ಪ್ರಯಾಣಿಸುವ ಮುಖಾಂತರ ಅದಕ್ಕೆ ಮತ್ತಷ್ಟು ಭೀತಿಗೊಳಿಸಿದ್ದಾನೆ. ಇದು ಪ್ರಾಣಿ ಪ್ರಿಯರನ್ನು ಆಕ್ರೋಶ ತರಿಸಿದೆ.
ವಿಡಿಯೋ ಕೃಪೆ: TOI
https://youtu.be/AMXMXDnFG-c