ಕಫದ ಸಮಸ್ಯೆ ಇಲ್ಲದೆಯೂ ಕಾಡುವ ಕೆಮ್ಮು ಹಿರಿಯರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದಕ್ಕೆ ಡಾಕ್ಟರ್ ಬಳಿ ತೆರಳದೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.
ಹಿರಿಯರಿಗೆ ಗಾಳಿಯಲ್ಲಿ ಅಂದರೆ ಉಸಿರಾಟದಲ್ಲಿ ಒಣ ಗಾಳಿ ಹೆಚ್ಚು ಸೇವಿಸಲ್ಪಟ್ಟಾಗ ಮೂಗು ಒಣಗಿದಂತಾಗಿ ಒಣ ಕೆಮ್ಮು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಒಂದೆರಡು ಚಮಚದಷ್ಟು ನೀರು ಕುಡಿಯುತ್ತಿರುವುದರಿಂದ ಈ ಒಣಕೆಮ್ಮಿನ ಸಮಸ್ಯೆ ಕಾಡದು. ಹದ ಬಿಸಿ ನೀರು ನಿಮ್ಮ ಆಯ್ಕೆಯಾಗಿರಲಿ.
ಸಣ್ಣ ತುಂಡು ಕಲ್ಲುಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. ಇದರ ರಸವನ್ನು ನುಂಗುತ್ತಿರಿ. ಇದರಿಂದ ಗಂಟಲಿನ ತೆಳುವಾದ ಸ್ರವಿಸುವಿಕೆ ಕಡಿಮೆಯಾಗಿ ಕೆಮ್ಮು ದೂರವಾಗುತ್ತದೆ.
ಅಲರ್ಜಿ ಕೆಮ್ಮು ಬಂದಾಗ ಕ್ಯಾಂಡಿ, ವಿಕ್ಸ್ ಚಾಕೊಲೇಟ್ ಸೇವಿಸಿ. ಮಕ್ಕಳಿಗೆ ಇದನ್ನು ಕೊಟ್ಟರೂ ಅವರು ತಿನ್ನಲಾರರು. ಹಾಗಾಗಿ ಅವರಿಗೆ ಕಲ್ಲುಸಕ್ಕರೆ ಕೊಡಿ. ಧೂಮಪಾನದಿಂದ ಕಡ್ಡಾಯವಾಗಿ ದೂರವಿರಿ. ಸೇದುವವರಿದ್ದರೆ ಅವರ ಹತ್ತಿರಕ್ಕೂ ಹೋಗದಿರಿ. ದೇವರ ಕೋಣೆಯ ಊದುಬತ್ತಿ ಅಥವಾ ಧೂಪದಿಂದಲೂ ದೂರವಿರುವುದು ಒಳ್ಳೆಯದು.