ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ?
ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು ಬಾರಿ, ಪುದೀನಾ, ಬಸಳೆ, ಹರಿವೆ ಅಥವಾ ಮೆಂತೆ ಸೊಪ್ಪನ್ನು ಬಳಸಿ. ಇದರಿಂದ ಕ್ಯಾಲ್ಸಿಯಂ ಕೊರತೆಗೆ ಸಂಬಂಧಿಸಿದ ಯಾವ ರೋಗವೂ ನಿಮ್ಮನ್ನು ಕಾಡದು.
ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವ ಹಣ್ಣುಗಳಿಗೂ ನಿಮ್ಮ ಆಹಾರ ಕ್ರಮದಲ್ಲಿ ಜಾಗವಿರಲಿ. ಅದರಲ್ಲೂ ನೇರಳೆ ಹಣ್ಣು ಸಿಗುವ ಸೀಸನ್ ನಲ್ಲಿ ಮರೆಯದೆ ಅದನ್ನು ಸೇವಿಸಿ. ಸ್ವಚ್ಛವಾಗಿ ತೊಳೆದು ತಿನ್ನಲು ಮಾತ್ರ ಮರೆಯದಿರಿ.
ಮೊಳಕೆ ಬರಿಸಿದ ಧಾನ್ಯಗಳಲ್ಲಿ ಇರುವಷ್ಟು ಫೈಬರ್ ಮತ್ತೆಲ್ಲೂ ಸಿಗದು, ಹಾಗಾಗಿ ವಾರಕ್ಕೆರಡು ಬಾರಿಯಾದರೂ ವಿವಿಧ ಧಾನ್ಯ ಅಥವಾ ಬೇಳೆ ಕಾಳುಗಳನ್ನು ಬಳಸಿ. ಬೆಳ್ಳುಳ್ಳಿ, ಶುಂಠಿ, ಮೊಟ್ಟೆಯೂ ವಾರದಲ್ಲಿ ಎರಡರಿಂದ ಮೂರು ಬಾರಿ ನಿಮ್ಮ ಮೆನುವಿನಲ್ಲಿರಲಿ.