ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ವೇಯ್ಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಜೆರೆಮಿ ಅವರ ಎಡಗೈ ಮೇಲಿರುವ ಟ್ಯಾಟೂ ಕೂಡ ಎಲ್ಲರ ಗಮನ ಸೆಳೆದಿದೆ. ಈ ಟ್ಯಾಟೂ ಹಿಂದೆ ಇರೋ ಇಂಟ್ರೆಸ್ಟಿಂಗ್ ಸಂಗತಿಯನ್ನು ಖುದ್ದು ಜೆರೆಮಿ ಅವರೇ ಬಹಿರಂಗಪಡಿಸಿದ್ದಾರೆ.
ಜೆರೆಮಿಯ ಎಡಗೈ ಮೇಲೆ ವ್ಯಕ್ತಿಯೊಬ್ಬ ಭಾರ ಎತ್ತುತ್ತಿರುವ ಚಿತ್ರವಿದೆ. ನವೆಂಬರ್ 11, 2011 ಅಂತಾನೂ ರೋಮನ್ ಅಂಕಿಗಳಲ್ಲಿ ಬರೆಯಲಾಗಿದೆ. ಅಂದು ಜೆರೆಮಿ ತಮ್ಮ ಜರ್ನಿಯನ್ನು ಆರಂಭಿಸಿದ್ದರು. ತಾವು ವೇಯ್ಟ್ ಲಿಫ್ಟಿಂಗ್ ಆರಂಭಿಸಿದ ದಿನಾಂಕವನ್ನೇ ಆತ ಎಡಗೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಇದರ ಕೆಳಭಾಗದಲ್ಲಿ ವ್ಯಕ್ತಿಯೊಬ್ಬ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡಿರುವ ಟ್ಯಾಟೂ ಇದೆ. ಅವರ ತಂದೆ ಲಾಲ್ನೆಹ್ಲುತುಂಗಾ ಬಾಕ್ಸರ್ ಆಗಿದ್ದರು. ಅದನ್ನು ಕೂಡ ಜೆರೆಮಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ತಂದೆ ಬಾಕ್ಸರ್, ನಾನೊಬ್ಬ ವೇಯ್ಟ್ ಲಿಫ್ಟರ್. ಇವೆರಡನ್ನೂ ಈ ಟ್ಯಾಟೂಗಳು ಬಿಂಬಿಸುತ್ತವೆ ಅಂತಾ ಜೆರೆಮಿ ಹೇಳಿದ್ದಾರೆ.