ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ 25 ವರ್ಷದ ಯುವಕ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೊಮ್ ಸಿಗದಿದ್ದಾಗ ಖಾಸಗಿ ಅಂಗವನ್ನು ಅಂಟಿನಿಂದ ಸೀಲ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಫತೇವಾಡಿ ಪ್ರದೇಶದ 25 ವರ್ಷದ ಯುವಕ ಸಲ್ಮಾನ್ ಮಿರ್ಜಾ ಎಂದು ಗುರುತಿಸಲಾಗಿದೆ, ತನ್ನ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ವೇಳೆ ರಕ್ಷಣೆಗಾಗಿ ತನ್ನ ಖಾಸಗಿ ಭಾಗಗಳನ್ನು ಅಂಟಿನಿಂದ ಮುಚ್ಚಿಕೊಂಡಿದ್ದ ಎಂದು ತಿಳಿದು ಬಂದಿದೆ. ದುರಂತದ ಬಗ್ಗೆ ಪೊಲೀಸ್ ತನಿಖೆ ಕೈಗೊಳ್ಳಲಾಗಿದೆ.
ಸಲ್ಮಾನ್ ಮಿರ್ಜಾ ಮತ್ತು ಅವನ ಗೆಳತಿ, ಇಬ್ಬರೂ ಮಾದಕ ವ್ಯಸನಿಗಳಾಗಿದ್ದು, ಜೂನ್ 22 ರಂದು ನಗರದ ಜುಹಾಪುರ ಪ್ರದೇಶದ ಹೋಟೆಲ್ ಗೆ ಹೋಗಿದ್ದರು. ಇಬ್ಬರೂ ಒಬ್ಬ ಮಹಿಳೆಯ ಜೊತೆಗಿದ್ದರು.
ಮಿರ್ಜಾ ಮತ್ತು ಆತನ ಗೆಳತಿ, ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಬಿಟ್ಟಿದ್ದ. ಇಬ್ಬರೂ ಮಾದಕ ದ್ರವ್ಯ ಸೇವಿಸಿ ನಂತರ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕಾಂಡೊಮ್ ನಂತಹ ಯಾವುದೇ ರಕ್ಷಣಾ ಸಾಧನ ಇಲ್ಲದ ಕಾರಣ, ಆಕೆ ಗರ್ಭಿಣಿಯಾಗದಂತೆ ನೋಡಿಕೊಳ್ಳಲು ಆತನ ಖಾಸಗಿ ಭಾಗಕ್ಕೆ ಅಂಟನ್ನು ಹಚ್ಚಿ ಸೀಲ್ ಮಾಡಲು ನಿರ್ಧರಿಸಿದರು.
ಕಿಕ್ ಗಾಗಿ ಅವರು ಕೆಲವೊಮ್ಮೆ ವೈಟ್ನರ್ ಬಳಸುತ್ತಿದ್ದರಿಂದ ಮಾದಕ ವಸ್ತುವಿನ ಜೊತೆಗೆ ವೈಟ್ನರ್ ಒಯ್ಯುತ್ತಿದ್ದರು, ಮರು ದಿನ, ಮಿರ್ಜಾ ಅಂಬರ್ ಟವರ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನಿಗೆ ಪರಿಚಿತನಾದ ವ್ಯಕ್ತಿ ಪೊದೆಗಳಲ್ಲಿ ಪ್ರಜ್ಞಾಹೀನನಾಗಿ ಮಿರ್ಜಾ ಬಿದ್ದಿರುವುದನ್ನು ನೋಡಿ ಆತನನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಆರೋಗ್ಯ ಹದಗೆಟ್ಟಿದ್ದರಿಂದ, ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಜೂನ್ 25 ರಂದು ಮೃತ ಯುವಕನ ಸಂಬಂಧಿ ಸಾಯಿರಾಬಾನು ಮಿರ್ಜಾ, ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದರು. ನಂತರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸರಸದ ವೇಳೆ ಖಾಸಗಿ ಅಂಗಕ್ಕೆ ಅಂಟಿನ ಬಳಕೆ ಯುವಕನ ಆರೋಗ್ಯಕ್ಕೆ ತೊಂದರೆ ಉಂಟು ಮಾಡಿದೆ ಎಂದು ಶಂಕಿಸಲಾಗಿದೆ. ಇದರ ಪರಿಣಾಮವಾಗಿಯೇ ಮಿರ್ಜಾ ಮೃತಪಟ್ಟರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿರುವ ಮೃತರ ಒಳಾಂಗಗಳ ಮಾದರಿಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಡಿಸಿಪಿ (ವಲಯ 7) ಪ್ರೇಮಸುಖ್ ದೇಲು ತಿಳಿಸಿದ್ದಾರೆ.