ಪ್ರತಿದಿನ ಕಾಫಿ ಕುಡಿಯುವುದು ಅನೇಕ ಜನರ ದಿನಚರಿಯ ಭಾಗವಾಗಿದೆ. ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಅನ್ನೋದನ್ನು ನೀವು ಕೇಳಿರ್ತೀರಾ. ಆದ್ರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಕಾಫಿ ಸೇವನೆ ಬಗ್ಗೆ ಅಚ್ಚರಿಯ ಅಂಶವೊಂದು ಬಹಿರಂಗವಾಗಿದೆ.
ಚೀನಾದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಂಶೋಧನೆಯ ಪ್ರಕಾರ ಕಾಫಿ ಕುಡಿಯುವವರಿಗೆ ಆಯಸ್ಸು ಹೆಚ್ಚು. ಆದ್ರೆ ಸಕ್ಕರೆ ಹಾಕಿಕೊಂಡು ಕಾಫಿ ಕುಡಿಯುವವರಿಗೆ ಇದು ಅನ್ವಯಿಸುವುದಿಲ್ಲ. ಸಕ್ಕರೆ ಸಹಿತ ಹಾಗೂ ಸಕ್ಕರೆ ರಹಿತ ಕಾಫಿ ಕುಡಿಯುವವರ ಆರೋಗ್ಯ ನಡವಳಿಕೆಯನ್ನು ಸಂಶೋಧಿಸಲಾಗಿದೆ. ವಿಜ್ಞಾನಿಗಳ ಪ್ರಕಾರ ಸಕ್ಕರೆ ಹಾಕದೇ ಕಾಫಿ ಕುಡಿಯುವವರ ಆಯಸ್ಸು ಹೆಚ್ಚುತ್ತದೆ.
ಕಾಫಿ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಏಳು ವರ್ಷಗಳವರೆಗೆ ವ್ಯಕ್ತಿಯ ಜೀವನವನ್ನು ಹೆಚ್ಚಿಸುತ್ತದೆ ಎಂಬುದು ದೃಢಪಟ್ಟಿದೆ. ಸಕ್ಕರೆ ಸೇರಿಸಿ ಕಾಫಿ ಕುಡಿದ ನಂತರ ಜನರ ವಯಸ್ಸು ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. 1,71,000 ಕ್ಕೂ ಹೆಚ್ಚು ಜನರನ್ನು ಸಂಶೋಧನೆಗೆ ಒಳಪಡಿಸಿದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಇವರೆಲ್ಲ ಆರೋಗ್ಯವಂತರು. ಅವರಿಗೆ ಯಾವುದೇ ರೀತಿಯ ಹೃದ್ರೋಗ ಅಥವಾ ಕ್ಯಾನ್ಸರ್ ಇರಲಿಲ್ಲ.
ಕಾಫಿ ಕುಡಿಯದವರಿಗಿಂತ ಸಕ್ಕರೆ ಇಲ್ಲದೆ ಕಾಫಿ ಸೇವಿಸುವ ಜನರು ಸಾಯುವ ಸಾಧ್ಯತೆ ಶೇ.16 ರಿಂದ 21 ರಷ್ಟು ಕಡಿಮೆ ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ದಿನಕ್ಕೆ ಸಕ್ಕರೆ ಹಾಕಿದ ಸುಮಾರು 3 ಕಪ್ ಕಾಫಿ ಕುಡಿಯುವ ಜನರು ಕಾಫಿ ಕುಡಿಯದವರಿಗಿಂತ ಸಾಯುವ ಸಾಧ್ಯತೆ ಶೇ.29 ರಿಂದ 31 ಪ್ರತಿಶತದಷ್ಟು ಕಡಿಮೆ ಎಂದು ಕಂಡುಬಂದಿದೆ. ಆದರೆ ಕೇವಲ ಒಂದು ಟೀ ಚಮಚ ಸಕ್ಕರೆ ಸೇರಿಸಿದ ಕಾಫಿ ಕುಡಿಯುವವರಿಗೆ ಮಾತ್ರ ಇದು ಅನ್ವಯಿಸುತ್ತದೆ.
ಈ ಅಧ್ಯಯನದ ಪ್ರಕಾರ ಜನರು ತಮ್ಮ ಕಾಫಿಗೆ ಪ್ರತಿದಿನ ಹಾಕುವ ಸಕ್ಕರೆಯ ಸರಾಸರಿ ಪ್ರಮಾಣವು, ಯಾವುದೇ ರೆಸ್ಟೋರೆಂಟ್‌ನ ವಿಶೇಷ ಪಾನೀಯಗಳಿಗಿಂತ ಕಡಿಮೆಯಿರುವುದು ಕಂಡುಬಂದಿದೆ. ಈ ಸಂಶೋಧನೆಯ ಆಧಾರದ ಮೇಲೆ, ಕಾಫಿ ಕುಡಿಯುವುದು ಕೆಟ್ಟದ್ದಲ್ಲ ಎಂದು ಹೇಳಬಹುದು, ಆದರೆ ಹೆಚ್ಚಿನ ಕ್ಯಾಲೋರಿ ಹೊಂದಿರುವ ಕಾಫಿ ಕುಡಿಯುವುದನ್ನು ತಪ್ಪಿಸಬೇಕು.