alex Certify ಕಾಪಿ ಚೀಟಿಯಿಂದಾದ ಘೋರ ದುರಂತ; ಲವ್‌ ಲೆಟರ್‌ ಎಂದು ಭಾವಿಸಿ ಬಾಲಕನ ಹತ್ಯೆ ಮಾಡಿದ ಹುಡುಗಿ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಪಿ ಚೀಟಿಯಿಂದಾದ ಘೋರ ದುರಂತ; ಲವ್‌ ಲೆಟರ್‌ ಎಂದು ಭಾವಿಸಿ ಬಾಲಕನ ಹತ್ಯೆ ಮಾಡಿದ ಹುಡುಗಿ ಪೋಷಕರು

ಮಹಾರಾಷ್ಟ್ರ: ಆತ ಪರೀಕ್ಷೆ ಸಮಯದಲ್ಲಿ ಕಾಪಿ ಹೊಡೆಯಲು ಚೀಟಿ ತಂದಿದ್ದ. ಅದೇ ಶಾಲೆಯಲ್ಲಿ ಅವನ ಕಸಿನ್ ಕೂಡ ಇದ್ದಳು. ಹೀಗಾಗಿ ತಾನು ಕಾಪಿ ಹೊಡೆದ ನಂತರ ಕಸಿನ್ ಕಡೆಗೆ ಕಾಪಿ ಚೀಟಿ ಎಸೆದಿದ್ದಾನೆ. ಈ ವೇಳೆ ಕಾಪಿ ಚೀಟಿ ಮಿಸ್ ಆಗಿ ಹಿಂದೆ ಇದ್ದ ಹುಡುಗಿ ಬಳಿ ಬಿದ್ದಿದೆ. ಇಷ್ಟೆ ಆಗಿದ್ದು. ಮುಂದೆ ನಡೆದಿದೆಲ್ಲ ದುರಂತ.

ಹೌದು, ಈ ಘಟನೆ ನಡೆದಿರೋದು ಮಹಾರಾಷ್ಟ್ರ ಬಳಿಯ ಪಟ್ನಾದಲ್ಲಿ. ತನ್ನ ಕಸಿನ್ ಗೆ ಹಾಕಿದ್ದ ಕಾಪಿ ಚೀಟಿಯನ್ನ ಹಿಂದೆ ಇದ್ದ ಹುಡುಗಿ ಲವ್ ಲೆಟರ್ ಅಂದುಕೊಂಡು ಮನೆಯವರಿಗೆ ಹೇಳಿದ್ದಾಳೆ. ಮಗಳ ಮಾತನ್ನ ಕೇಳಿದ ಮನೆಯವರು ಆ ಚೀಟಿಯಲ್ಲಿ ಏನಿದೆ ಅನ್ನೋದನ್ನೂ ನೋಡಿಲ್ಲ. ಪತ್ರ ಎಸೆದಿದ್ದ ಬಾಲಕನನ್ನು ಥಳಿಸಿ, ಆತನ ದೇಹವನ್ನು ಕತ್ತರಿಸಿ ಕೊಂದು ಹಾಕಿದ್ದಾರೆ.

ಇನ್ನು ಈ ಬಾಲಕನ ಅಂಗಗಳನ್ನು ರೈಲ್ವೆ ಹಳಿಯ ಮೇಲೆ ಎಸೆದಿದ್ದಾರೆ. ರೈಲ್ವೆ ಹಳಿ ಬಳಿ ವ್ಯಕ್ತಿಯ ದೇಹದ ಅಂಗಗಳು ಸಿಕ್ಕಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ‌. ತನಿಖೆ ಬಳಿಕ ಈ ಪ್ರಕರಣವನ್ನು ಭೇದಿಸಿದ್ದಾರೆ. ಅಷ್ಟೆ ಅಲ್ಲ ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...