alex Certify ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ 3 ದಿನಗಳ ಕಾಲ ‘ಕಡಲೆ ಕಾಯಿ ಪರಿಷೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ 3 ದಿನಗಳ ಕಾಲ ‘ಕಡಲೆ ಕಾಯಿ ಪರಿಷೆ’

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ 6ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ.

ನವೆಂಬರ್ 12ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಈ ಕಡಲೆಕಾಯಿ ಪರಿಷೆಯಲ್ಲಿ 400 ಮಳಿಗೆಗಳು ಹಾಗೂ ದೇಶಿ ತಳಿ ಗೂಳಿಗಳು ಆಕರ್ಷಣೆಯ ಕೇಂದ್ರ ಬಿಂದು ಆಗಲಿವೆ.

ನಗರದ ಜನತೆಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿ ಪರಿಚಯಿಸುವ ಸಲುವಾಗಿ ಕಾಡು ಮಲ್ಲೇಶ್ವರ ಬಳಗದಿಂದ ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ಈ ಪರಿಷೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಇದು 6ನೇ ವರ್ಷವಾಗಿದೆ.

ರೈತರು ತಾವು ಬೆಳೆದ ಕಡಲೆಕಾಯಿ, ಅವರೆಕಾಯಿಯನ್ನು ಮಾರಾಟ ಮಾಡುವ ಸಲುವಾಗಿ ಮಲ್ಲೇಶ್ವರ 8ನೇ ಕ್ರಾಸ್ ನಿಂದ 16ನೇ ಕ್ರಾಸ್ ವರೆಗೆ ಅಂಗಡಿ ತೆರೆಯಬಹುದಾಗಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ಬೆಲ್ಲದ ಅಂಗಡಿ ತೆರೆಯಲು ಸಹ ಅವಕಾಶ ನೀಡಲಾಗುತ್ತದೆ. ಜೊತೆಗೆ ಇತರೆ ಕೃಷಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...