ಸಾಮಾನ್ಯವಾಗಿ ಕಾಡುವ ಶೀತ, ಕಫಕ್ಕೆ ಈ ಮನೆಮದ್ದನ್ನು ಬಳಸಿ, ರೋಗ ಮುಕ್ತರಾಗಿರಿ.
ಹದಿನೈದು ಬಾದಾಮಿಯನ್ನು ತೆಗೆದುಕೊಳ್ಳಿ. ಇದರಲ್ಲಿರುವ ಪ್ರೊಟೀನ್, ವಿಟಮಿನ್ಸ್, ಜಿಂಕ್ ಗಳು ನಮ್ಮ ದೇಹದಲ್ಲಿ ಇಮ್ಯುನಿಟಿಯನ್ನು ಬೂಸ್ಟ್ ಮಾಡುತ್ತವೆ ಹಾಗೂ ವೈರಸ್ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹತ್ತು ಗ್ರಾಂ ಕಲ್ಲು ಸಕ್ಕರೆ ತೆಗೆದುಕೊಳ್ಳಿ. ಇದು ಶೀತ, ಕಫ ಮತ್ತು ಮುಖ್ಯವಾಗಿ ಸೀನುಗಳು ಬರುವುದನ್ನು ತಡೆಯುತ್ತದೆ. ಹಾಗೇ ತಲೆನೋವಿಗೆ ಇದು ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ.
ಹದಿನೈದರಿಂದ ಹದಿನಾರು ಕಾಳು ಮೆಣಸು ತೆಗೆದುಕೊಳ್ಳಿ. ಇದರಲ್ಲೂ ನೋವು ನಿವಾರಕ ಗುಣವಿದೆ. ಜೀರ್ಣಕ್ರಿಯೆಯನ್ನು ಕೂಡ ಸುಲಭಗೊಳಿಸುತ್ತದೆ. ಈ ಮೂರನ್ನು ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿ.
ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿಯನ್ನು ಹಾಕಿ ರಾತ್ರಿ ಊಟದ ಬಳಿಕ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಕಫ ನಿವಾರಣೆ ಆಗುತ್ತದೆ. ಶೀತ ಇಳಿಯುತ್ತದೆ. ಸೈನಸ್ ಸಮಸ್ಯೆ ಕೂಡ ಬಗೆಹರಿಯುತ್ತದೆ.