ಮನೆಯಲ್ಲೇ ಕುಳಿತು ಕಾಡುವ ಮೊಡವೆಗೆ ಮದ್ದೇನು ಎಂಬ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಸರಳವಾದ ಒಂದಷ್ಟು ಟಿಪ್ಸ್ ಗಳು ಇಲ್ಲಿವೆ.
ಕಾಯಿಸಿ ಆರಿಸಿದ ಹಾಲಿಗೆ ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿದರೆ ಬ್ಲ್ಯಾಕ್ ಹೆಡ್ ನಾಶವಾಗಿ ತ್ವಚೆ ಕಾಂತಿಯುತವಾಗುತ್ತದೆ.
ದಾಲ್ಚಿನಿ ಚೆಕ್ಕೆ ತೇದು, ಜೇನುತುಪ್ಪ ಬೆರೆಸಿ ಮಲಗುವ ಮುನ್ನ ಮೊಡವೆಗಳ ಮೇಲೆ ಹಚ್ಚಿ ಬೆಳಗ್ಗೆ ತೊಳೆದರೆ ಮೊಡವೆ ಸಂಪೂರ್ಣ ಮಾಯವಾಗುತ್ತದೆ. ಕಹಿಬೇವಿನ ಎಲೆಗೆ ಅರಶಿನ ಬೆರೆಸಿ ಹಚ್ಚಿದರೆ ತ್ವಚೆಗೆ ಹೊಳಪು ಬರುವುದು ಮಾತ್ರವಲ್ಲ ಮೊಡವೆಯೂ ಮೂಡದು.
ಮೆಂತೆ ಸೊಪ್ಪು ಅರೆದು ಮುಖಕ್ಕೆ ಹಚ್ಚಿ 20 ನಿಮಿಷ ಬಳಿಕ ತೊಳೆಯುವುದರಿಂದ ಮೊಡವೆ ಹಾಗು ಸುಕ್ಕು ಕಡಿಮೆಯಾಗುತ್ತದೆ. ಕಿತ್ತಳೆ ಸಿಪ್ಪೆಗೆ ನೀರು ಬೆರೆಸಿ ನುಣ್ಣಗೆ ರುಬ್ಬಿ. ಕಣ್ಣಿನ ಸುತ್ತ ಹೊರತುಪಡಿಸಿ ಮುಖಕ್ಕೆಲ್ಲ ಲೇಪಿಸಿಕೊಳ್ಳಿ. 15 ನಿಮಿಷಗಳ ಬಳಿಕ ತೊಳೆಯುವುದರಿಂದ ಮುಖ ಕಾಂತಿಯುತವಾಗುತ್ತದೆ.
ಮೊಡವೆ ಸಮಸ್ಯೆಯೂ ಕಾಡುವುದಿಲ್ಲ. ನೆನಪಿಡಿ ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಸಾಕು. ನಿತ್ಯ ಹಾಕಿಕೊಳ್ಳುವುದು ಬೇಡ.